Dog Show | ಶ್ವಾನಗಳ ತುಂಟಾಟಕ್ಕೆ ಮಕ್ಕಳು ಫಿದಾ, ಒಂದೇ ಕಡೆ 30ಕ್ಕೂ ಹೆಚ್ಚು ಶ್ವಾನ ತಳಿಗಳ ದರ್ಶನ

DOG SHOW Gandhi Bazar 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ನಗರದ ಗಾಂಧಿ ಪಾರ್ಕ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ಸುಮಾರು 30ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡಿದ್ದವು.
ಶಿವಮೊಗ್ಗ ಜಿಲ್ಲೆಯ ಸಾಗರ, ಭದ್ರಾವತಿ ಸೇರಿದಂತೆ ರಾಜ್ಯದ ಮೈಸೂರು, ಬೆಂಗಳೂರು, ದಾವಣಗೆರೆ ಹೀಗೆ ಹತ್ತಾರು ಜಿಲ್ಲೆಗಳಿಂದ ಶ್ವಾನಗಳನ್ನು ಕರೆದುಕೊಂಡು ಬರಲಾಗಿತ್ತು. ದೇಸಿ ತಳಿ ಮುಧೋಳ ಸೇರಿದಂತೆ ನಾನಾ ತಳಿಯ ಶ್ವಾನಗಳು ಜನರ ಗಮನ ಸೆಳೆಯಿತು.

READ | ಪ್ರಾಣಿಗಳ ಮಾರಾಟ ಮಳಿಗೆ ಮಾಲೀಕರೇ ಗಮನಿಸಿ, ನೋಂದಣಿಗೆ 30 ದಿನಗಳ ಗಡುವು, ಹೇಗೆ ನೋಂದಣಿ?

Dog show
ಮಕ್ಕಳಿಗೆ ಮುದ ನೀಡಿದ ಶ್ವಾನಗಳು
ಎಲ್ಲ ವಯೋಮಾನದವರು ಶ್ವಾನಗಳನ್ನು ವೀಕ್ಷಿಸಿ ಖುಷಿಪಟ್ಟರು. ಅದರಲ್ಲಿ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುದ್ದಾಗಿ ಉಡುಪುಗಳನ್ನು ಧರಿಸಿ ತಂದಿದ್ದ ಶ್ವಾನಗಳನ್ನು ಕಂಡು ಅವುಗಳೊಂದಿಗೆ ಆಟವಾಡಿದರು. ಮುದ್ದಾಡಿದರು. ಪ್ರೀತಿಯಿಂದ ಅಪ್ಪಿಕೊಂಡರು.
“ಚಾರ್ಲಿ(charlie) 777” ಕನ್ನಡ ಚಲನಚಿತ್ರದ ಬಳಿಕ ಶ್ವಾನ ಸಾಕುವುದು ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅದಕ್ಕೆ ಡಾಗ್ ಶೋ ಸಾಕ್ಷಿಯಾಯಿತು.
ಬೀದಿ ನಾಯಿಗಳಿಗೆ ಉಚಿತ ಚುಚ್ಚುಮದ್ದು
ಡಾಗ್ ಶೋ ನಡೆಯುತ್ತಿದ್ದ ಆವರಣದಲ್ಲಿಯೇ ಬೀದಿ ನಾಯಿಗಳಿಗೆ ಆಂಟಿ ರೇಬಿಸ್ ಚುಚ್ಚುಮದ್ದು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರೊಂದಿಗೆ ಶ್ವಾನಗಳ ಸಾಕಾಣಿಕೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಯಿತು.

error: Content is protected !!