
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಹಬ್ಬದ ವಾತಾವರಣವಿದೆ. ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿದ್ದು, ಇನ್ನೂ ಗಾಂಧಿ ಬಜಾರ್ ಕೂಡ ತಲುಪಿಲ್ಲ.
ಬೆಳಗ್ಗೆ 10.30ಕ್ಕೆ ಮೆರವಣಿಗೆ ಆರಂಭವಾಗಿದ್ದು, ಮಧ್ಯಾಹ್ನ 12ರ ಸುಮಾರಿಗೆ ಕೋಟೆ ರಸ್ತೆಯಲ್ಲಿ ಮೆರವಣಿಗೆ ಜರುಗಿತು. ಪ್ರಸ್ತುತ ಮೆರವಣಿಗೆಯು ಎಸ್‌ಪಿಎಂ ರಸ್ತೆಯಲ್ಲಿದೆ. ಗಣಪತಿಗೆ ಪೂಜೆ ಸಲ್ಲಿಸಲಾಗಿದ್ದು, ನೆರೆಹೊರೆಯ ಬಡಾವಣೆ ಜನ ಹೂವು, ಹಣ್ಣು ಅರ್ಪಿಸುತ್ತಿದ್ದಾರೆ.
READ | ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಅಲಂಕಾರಗೊಂಡ ಶಿವಮೊಗ್ಗ, ಇಲ್ಲಿದೆ ಫೋಟೊ ಆಲ್ಬಂ
ಜನವೋ ಜನ
ಅಮೀರ್ ಅಹಮದ್ ವೃತ್ತ, ಗೋಪಿ ವೃತ್ತ ಹಾಗೂ ನೆಹರೂ ರಸ್ತೆ ಜನರಿಂದ ಕಿಕ್ಕಿರಿದಿದೆ. ಗೋಪಿ ವೃತ್ತದಲ್ಲಿ ಈಗಾಗಲೇ ಡಿಜೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೂವುಗಳಿಂದ ರಂಗೋಲಿಗಳನ್ನು ಬಿಡಿಸಲಾಗುತ್ತಿದೆ.
ಯಾವ್ಯಾವ ರಸ್ತೆಗಳು ಬಂದ್?
ದುರ್ಗಿಗುಡಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೆಡ್ ಅಳವಡಿಸಿ ಬಂದ್ ಮಾಡಲಾಗಿದೆ. ಯಾವುದೇ ವಾಹನಗಳ ಓಡಾಟಕ್ಕೂ ಅವಕಾಶ ನೀಡಲಾಗುತ್ತಿಲ್ಲ. ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್ ನಿಂದ ಪಾಲಿಕೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಎಲ್ಲೆಡೆ ಸಂಚಾರ ದಟ್ಟಣೆಯೂ ಇದೆ.
ಯಾವ ರಸ್ತೆ ಸಂಚಾರ ಮುಕ್ತ?
ಕುವೆಂಪು ರಸ್ತೆ, ಡಿಸಿ ಕಚೇರಿ ಎದುರುಗಡೆ ರಸ್ತೆ, ಡಿವಿಎಸ್ ಕಾಲೇಜು ಅಕ್ಕಪಕ್ಕ ಈ ರಸ್ತೆಗಳಲ್ಲಿ ವಾಹನ ದಟ್ಟಣೆ ಇಲ್ಲ