
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅತ್ಯಂತ ವೈಭವದಿಂದ ನಡೆದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಸೇರಿದ್ದರು. ಬೆಳಗ್ಗೆ 10.30 ಗಂಟೆಗೆ ಕೋಟೆ ಭೀಮೇಶ್ವರದಿಂದ ಆರಂಭವಾದ ಮೆರವಣಿಗೆಯು ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಪೂರ್ಣಗೊಂಡಿತು.
ಜೈ ಶ್ರೀರಾಮ, ಆಂಜನೇಯ ಮತ್ತು ಗಣಪತಿಯ ಘೋಷಣೆಗಳನ್ನು ಕೂಗುತ್ತಾ ತುಂಗಾನದಿಯ ಭೀಮನಮಡುವಿನಲ್ಲಿ ವಿಸರ್ಜನೆ ಮಾಡಲಾಯಿತು.
READ | ಹಿಂದೂ ಮಹಾಸಭಾ ಗಣೇಶ, ವಿಶೇಷ ಅಲಂಕಾರ, ಇಲ್ಲಿದೆ ಫೋಟೊ ಆಲ್ಬಂ
ಡಿಜೆಗೆ ಯುವಕರು ಫಿದಾ
ಗೋಪಿ ವೃತ್ತದಲ್ಲಿ ಆಯೋಜಿಸಿದ್ದ ಡಿಜೆಗೆ ಯುವಕರು ಭರ್ಜರಿ ಸ್ಟೆಪ್ಸ್ ಹಾಕಿದರು. ಯುವಕ ಯುವತಿಯರು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಡಿಜೆ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿ ಮಾತನಾಡಿದರು.
ಅಲ್ಲಿಂದ ಸಾಗಿದ ಮೆರವಣಿಗೆ ಜೈಲು ವೃತ್ತಕ್ಕೆ ತಲುಪಿತು. ವಿವಿಧೆಡೆ ಗಣೇಶನನ್ನು ಬರಮಾಡಿಕೊಂಡು ಹೂವಿನ ಹಾರ ಹಾಕಲಾಯಿತು.
ಪ್ರಕಟಣೆ ಹೊರಡಿಸಿದ ಹಿಂದೂ ಸಂಘಟನಾ ಮಹಾಮಂಡಳಿ
SHIMOGA: ನಗರದ ಹಿಂದೂ ಸಂಘಟನಾ ಮಹಾಮಂಡಳಿಯ ವತಿಯಿಂದ ನಿನ್ನೆ ನಡೆದ ವಿಸರ್ಜನೆಯು ಬೆಳಗಿನ ಜಾವ 4ಕ್ಕೆ ತುಂಗಾ ನದಿಯ ಭೀಮನ ಮಡುವಿನಲ್ಲಿ ಶಾಂತಿಯುತವಾಗಿ ನೆರವೇರಿತು.
ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ವಿಸರ್ಜನಾ ಪೂರ್ವ ಮೆರವಣಿಗೆ ಹಾಗೂ ವಿಸರ್ಜನೆಯನ್ನು ನಡೆಸಲು ಸಹಕರಿಸಿದ ಎಲ್ಲರಿಗೆ ಮಂಡಳಿಯ ಸಂಚಾಲಕ ಎಸ್.ಎಂ. ದತ್ತಾತ್ರೇಯ ರಾವ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ಶಿವಮೊಗ್ಗೆಯ ಜಿಲ್ಲಾಡಳಿತ, ರಕ್ಷಣಾ ಇಲಾಖೆ, ಹಾದಿಯುದ್ದಗಲಕ್ಕೂ ಪಾನೀಯ, ಅನ್ನಸಂತರ್ಪಣೆ, ಪ್ರಸಾದವನ್ನು ವಿತರಿಸಿದ, ವೈವಿಧ್ಯಮಯ ಹೂವಿನ ಹಾರವನ್ನು ಅರ್ಪಿಸಿದ ಎಲ್ಲ ಸಂಘ ಸಂಸ್ಥೆಯವರಿಗೆ, ಸಾರ್ವಜನಿಕರಿಗೆ ಹಾಗೂ ಕಣ್ಮನ ಸೆಳೆಯುವಂತೆ ಅಲಂಕರಿಸಿದ ಅಲಂಕಾರ ಸಮಿತಿ ಹಾಗೂ ಬೆಳಕಿನ ಸಂಯೋಜಕರು, ಉತ್ತಮ ಪ್ರಚಾರ ನೀಡಿದ ಮಾಧ್ಯಮ ಮಿತ್ರರು, ಸಾಮಾಜಿಕ ಜಲತಾಣದರಿಗೆ ಅಭಿನಂದನೆ ಸಲ್ಲಿಸಲಾಗಿದೆ.
ಮಂಗಳವಾದ್ಯ ಹಾಗೂ ಜಾನಪದ ಕಲೆಯ ರಸವನ್ನು ಉಣಬಡಿಸಿದ ಕಲಾವಿದರು, ವಿವಿಧ ಸಮಾಜ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಯ ಮುಖಂಡರು, ಹಣಕಾಸಿನ ನೆರವನ್ನಿತ್ತ ಉದಾತ್ತ ದಾನಿಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರವಿತ್ತ ಭಕ್ತಮಹಾಶಯರೆಲ್ಲರಿಗೂ ಹಿಂದೂ ಸಂಘಟನಾ ಮಹಾಮಂಡಳಿಯ ಹೃತ್ಪೂರ್ವಕ ಕೃತಜ್ಙತೆಯನ್ನು ಸಲ್ಲಿಸಿದೆ.