Job Interview | ಮಾ.20ರಂದು ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಯಾರೆಲ್ಲ ಭಾಗವಹಿಸಲು ಅವಕಾಶ?

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಐ.ಡಿ.ಎಸ್.ಪಿ. ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಎಪಿಡಮಾಲಜಿಸ್ಟ್ ಒಂದು ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಮಾ. 20 ರಂದು ಬೆಳಗ್ಗೆ 11.00 ರಿಂದ ಮ. 1.30 ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

READ | ಶಿವಮೊಗ್ಗದಲ್ಲಿ ವಿವಿಧ ಕಂಪನಿಗಳಿಂದ ಸಂದರ್ಶನ, ಎಸ್.ಎಸ್.ಎಲ್.ಸಿ. To ಡಿಗ್ರಿವರೆಗಿನವರು ಪಾಲ್ಗೊಳ್ಳಿ

ಯಾವೆಲ್ಲ ಹುದ್ದೆಗಳಿಗೆ ಸಂದರ್ಶನ?
ಮೆಡಿಕಲ್ ಗ್ರಾಜುಯೇಟ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ ಡಿಪ್ಲೋಮಾ ಇನ್ ಪ್ರಿವೆಂಟೀವ್ ಆ್ಯಂಡ್ ಸೋಷಿಯಲ್ ಮೆಡಿಸಿನ್/ಪಬ್ಲಿಕ್ ಹೆಲ್ತ್ ಅಥವಾ ಎಪಿಡಮಾಲಜಿ (ಎಂ.ಡಿ., ಎಂ.ಪಿ.ಹೆಚ್., ಡಿ.ಪಿ.ಹೆಚ್, ಎಂ,ಎ.ಇ) ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್ಸ್ ಜೊತೆಗೆ 1 ವರ್ಷದ ಪಬ್ಲಿಕ್ ಹೆಲ್ತ್ ಅಥವಾ ಎಂ.ಎಸ್.ಸಿ ಲೈಫ್ ಸೈನ್ಸ್ ಜೊತೆಗೆ 2 ವರ್ಷದ ಪಬ್ಲಿಕ್ ಹೆಲ್ತ್ ಅನುಭವ ಅಥವಾ ಎಂ.ಎಸ್.ಸಿ. (ಎಪಿಡಮಾಲಜಿ) ಜೊತೆಗೆ 2 ವರ್ಷದ ಪಬ್ಲಿಕ್ ಹೆಲ್ತ್ ಅನುಭವ ಹೊಂದಿರುವ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ 45 ವರ್ಷ ವಯೋಮಾನದ ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಐ.ಡಿ.ಎಸ್.ಪಿ. ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-275356ನ್ನು ಸಂಪರ್ಕಿಸುವುದು.

error: Content is protected !!