KPSC recruitment | ಪದವಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗ ಅವಕಾಶ, ಕೆಪಿಎಸ್.ಸಿ ಅಧಿಸೂಚ‌ನೆ

KPSC

 

 

ಸುದ್ದಿ ಕಣಜ.ಕಾಂ ಬೆಂಗಳೂರು
BANGALURU: ಪದವಿಧರರಿಗೆ ಭರ್ಜರಿ ಉದ್ಯೋಗ ಅವಕಾಶವಿದ್ದು, ಕರ್ನಾಟಕ ಲೋಕ ಸೇವಾ ಆಯೋಗ(KPSC)ವು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ 242 ಲೆಕ್ಕ ಸಹಾಯಕರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ.

READ | ಮಾರ್ಚ್ 20ರಂದು ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಯಾರೆಲ್ಲ ಭಾಗವಹಿಸಲು ಅವಕಾಶ?

ವಿಶೇಷವೆಂದರೆ, ಹಲವು ತಿಂಗಳುಗಳ ನಂತರ 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  • ನೇಮಕಾತಿ ಸಂಸ್ಥೆ- ಕರ್ನಾಟಕ ಲೋಕಸೇವಾ ಆಯೋಗ
  • ಹುದ್ದೆಯ ಹೆಸರು- ಲೆಕ್ಕ ಸಹಾಯಕ
  • ಹುದ್ದೆಗಳ ಸಂಖ್ಯೆ- 242
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 23-03-2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ- 23-04-2023
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ- 24-04-2023
  • ವೆಬ್ ಸೈಟ್: click
  • ಅಧಿಸೂಚನೆ- click

ಅಭ್ಯರ್ಥಿಗಳು ಹೊಂದಿರಬೇಕಾಸ ವಿದ್ಯಾರ್ಹತೆ
ಬಿಕಾಂ / ಬಿಬಿಎಂ / ಬಿಬಿಎ ಪದವಿಯಲ್ಲಿ ಪಾಸಾಗಿರಬೇಕು. ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
ಕನಿಷ್ಠ 21 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷವಾಗಿರಬೇಕು.

Job in shivamogga | ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನ

error: Content is protected !!