SSLC Exams | ತಂದೆಯ ಸಾವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಹೃದಯ ಕಲಕುವ ಘಟನೆ

sslc student

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಸನಗರದ ಗೇರುಪುರ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದ್ದು, ಸ್ಥಳೀಯರು ಶಾಲೆಯ ಪ್ರಾಚಾರ್ಯರು, ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿ ತೆಗೆದುಕೊಂಡ ನಿರ್ಧಾರಕ್ಕೆ ಭೇಷ್ ಎನ್ನುತ್ತಿದ್ದಾರೆ.

READ | ಶಿವಮೊಗ್ಗ ರೈಲ್ವೆ ಪ್ಲಾಟ್ ಫಾರಂನಲ್ಲಿ ಯುವಕ‌ ಆತ್ಮಹತ್ಯೆ, ಗಾಬರಿಯಲ್ಲಿ ಜನ

ನಡೆದಿದ್ದೇನು?
ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ಕೊಪ್ಪಳ ಮೂಲದ ಆರ್ಶಿಯಾ ಮನಿಯಾರ್ ಎಂಬ ವಿದ್ಯಾರ್ಥಿನಿಯ ತಂದೆ ಆಬಿದಾ ಪಾಪಾ(53) ಅವರು ಬುಧವಾರ ಮೃತಪಟ್ಟಿದ್ದಾರೆ. ತಕ್ಷಣ ಕುಟುಂಬದವರು ಆಕೆಯನ್ನು ತಂದೆಯ ಅಂತ್ಯಕ್ರಿಯೆಗೆ ಕಳುಹಿಸುವಂತೆ ಕೋರಿದ್ದಾರೆ. ಆದರೆ, ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿನಿ ಪ್ರತಿಭಾನ್ವಿತೆಯಾಗಿದ್ದು, ಓದು ಹಾಳಾಗುತ್ತದೆ ಎಂದು ಮನವೊಲೈಕೆ ಮಾಡಲು ಯತ್ನಿಸಿದ್ದಾರೆ. ಆದರೆ, ಅದು ಫೋನಿನಲ್ಲಿ ಸಾಧ್ಯವಾಗಿಲ್ಲ. ತದನಂತರ, ಆರ್ಶಿಯಾಳನ್ನು ಶಾಲೆಯ ಪ್ರಾಚಾರ್ಯರು, ವಾರ್ಡನ್ ಮತ್ತಿತರು ಸೇರಿ ಕೊಪ್ಪಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಂದೆಯ ಅಂತಿಮ ದರ್ಶನ ಮಾಡಿಸಿ ಹೊಸನಗರಕ್ಕೆ ವಾಪಸ್ ಕರೆದುಕೊಂಡು ಬಂದಿದ್ದಾರೆ.
ಸರಳವಾಗಿರಲಿಲ್ಲ ಪಯಣ
ರಸ್ತೆ ಹಾಳಾಗಿದ್ದು, ಇರುವ ಅಲ್ಪ ಸಮಯದಲ್ಲಿ ಹೋಗಿ ಬರುವುದು ಸೇರಿ ಒಟ್ಟು 700 ಕಿ.ಮೀ. ಪ್ರಯಾಣವನ್ನು ಮುಗಿಸಿ ವಿದ್ಯಾರ್ಥಿನಿಗೆ ಮತ್ತೆ ಪರೀಕ್ಷೆಯ ಸಮಯಕ್ಕೆ ವಾಪಸ್ ಕರೆದುಕೊಂಡು ಬರಬೇಕಿತ್ತು. ಬುಧವಾರ ರಾತ್ರಿ ಹೊಸನಗರದಿಂದ ಹೊರಟು ಕೊಪ್ಪಳಕ್ಕೆ ತಲುಪಿ, ಅಲ್ಲಿಂದ ಸುಮಾರು 1 ಗಂಟೆ ಇದ್ದು, ಗುರುವಾರ ಪರೀಕ್ಷೆಯ ಹೊತ್ತಿಗೆ ವಾಪಸ್ ಬಂದಿದ್ದಾರೆ. ವಿದ್ಯಾರ್ಥಿನಿ ಸಹ ಭಾವೋದ್ವೇಗದ ನಡುವೆಯೇ ಪರೀಕ್ಷೆ ಬರೆದಿದ್ದಾಳೆ.

READ | ಮಕ್ಕಳೇ, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಜರಾಗುವ ಮುನ್ನ ಒಮ್ಮೆ ಇದನ್ನು ಓದಿ, ಇಲ್ಲಿವೆ 13 ಟಿಪ್ಸ್

ಆನ್’ಲೈನ್‍ನಲ್ಲಿ ಅಂತಿಮ ದರ್ಶನ
ಆರ್ಶಿಯಾ ಪರೀಕ್ಷೆ ಬರೆದು ಹೊರಗಡೆ ಬಂದಿದ್ದೇ ಅಲ್ಲಿಯವರೆಗೆ ಕುಟುಂಬದವರು ಅಂತ್ಯಸಂಸ್ಕಾರ ಮಾಡದೇ ಕಾಯುತ್ತಿದ್ದರು. ಮಗಳು ಬಂದಿದ್ದೇ ಆನ್’ಲೈನ್ ಮೂಲಕವೇ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಬಾಲಕಿ ತಂದೆಯ ಸಾವಿನ ದುಖದಲ್ಲಿದ್ದಳು. ಈ ಘಟನೆ ಅಲ್ಲಿ ನೆರೆದಿದ್ದವರು ಕಣ್ಣೀರಾಗುವಂತೆ ಮಾಡಿತು.

ಮಗನಿಂದ ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟ ಕುಟುಂಬ, ಕೊನೆಗೆ ಮಗನನ್ನೂ ಬಲಿ ಪಡೆದ ಕೊರೊನಾ

error: Content is protected !!