ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿದ್ಯಾರ್ಥಿಗಳೇ ಭಯ ಬೇಡ. ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ. ಯಾವುದಕ್ಕೂ ಗಡಿಬಿಡಿ ಬೇಡ. ಮನಸ್ಸು ಪ್ರಶಾಂತವಾಗಿಟ್ಟುಕೊಳ್ಳಿ. ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೂ ಚಿಂತೆ ಬೇಡ. ಸಮರ್ಥವಾಗಿ ಉತ್ತರಿಸಬಲ್ಲವುಗಳನ್ನು ಮೊದಲು ದುಂಡು ಅಕ್ಷರದಲ್ಲಿ ಬರೆಯಿರಿ.
READ | ಆಲ್ ದ ಬೆಸ್ಟ್ ಸ್ಟೂಡೆಂಟ್ಸ್, ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ, ಹಾಜರಾಗಲಿದ್ದಾರೆ 23,372 ಮಕ್ಜಳು
ವಿದ್ಯಾರ್ಥಿಗಳಿಗೆ ಒಂದಿಷ್ಟು ಟಿಪ್ಸ್
- “ಪರೀಕ್ಷೆಯಲ್ಲಿ ಬರುವ ಸಾಕಷ್ಟು ಉತ್ತರಗಳು ನನಗೆ ತಿಳಿದಿರುತ್ತದೆ. ಪರೀಕ್ಷೆಗೆ ನಾನು ನನ್ನ ಶಕ್ತಿ ಮೀರಿ ತಯಾರಾಗಿದ್ದೇನೆ ಹಾಗಾಗಿ ನನಗೆ ಪರೀಕ್ಷೆ ಸುಲಭವಾಗಿರುತ್ತದೆ.” ಇಂತಹ ಸಕಾರಾತ್ಮಕ ಮನೋಧೋರಣೆ ಇರಲಿ.
- ಹೊಸ ಜಾಗ, ಹೊಸ ಜನರ ನಡುವೆ ಪರೀಕ್ಷೆ ಬರೆಯುವಾಗ ಕೆಲವು ವಿದ್ಯಾರ್ಥಿಗಳಿಗೆ ಭಯವಾಗಬಹುದು. ಇಂತವರು ತಮ್ಮ ಪೋಷಕರ ಜೊತೆ ಪರೀಕ್ಷಾ ಕೇಂದ್ರಗಳಿಗೆ ಮೊದಲೇ ಭೇಟಿ ನೀಡಿ ಒಮ್ಮೆ ಅಲ್ಲಿಯ ವಾತಾವರಣ, ಕೊಠಡಿಗಳು ಇವೆಲ್ಲವನ್ನೂ ಪರಿಚಿತ ಮಾಡಿಕೊಳ್ಳಿ. ಇದರಿಂದ ಆತಂಕದ ಪ್ರಮಾಣ ಕಡಿಮೆಯಾಗಬಹುದು.
- ಪರೀಕ್ಷೆಯ ಹಿಂದಿನ ದಿನ ರಾತ್ರಿ ಇಡೀ ಓದಿ ನಿದ್ದೆ ಬಿಡಬೇಡಿ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
- ಪರೀಕ್ಷೆ ಮುಗಿಯುವವರೆಗೆ ಹೊರಗಡೆ ಆಹಾರವನ್ನು ತ್ಯಜಿಸುವುದೇ ಉತ್ತಮ. ಇಲ್ಲವಾದರೆ, ಆರೋಗ್ಯ ಕೈಕೊಡಬಹುದು.
- ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚೆಯೇ ತೆರಳಿ. ಯಾವುದೇ ಕಾರಣಕ್ಕೂ ಕೊನೆಯ ಗಳಿಗೆಯಲ್ಲಿ ತರಾತುರಿ ಬೇಡ.
- ಪರೀಕ್ಷೆಯ ಮುನ್ನಾ ದಿನವೇ ಆ ವಿಷಯಕ್ಕೆ ಸಂಬಂಧಿಸಿದ ಪರೀಕ್ಷಾ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳಿ.
- ಪರೀಕ್ಷಾ ಕೇಂದ್ರ ತಲುಪಿದ್ದೇ ಮೊದಲು ನಿಮ್ಮ ಕೋಣೆ ಎಲ್ಲಿದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ಕೋಣೆಯಲ್ಲಿ ನಿಮ್ಮ ಆಸನ ಎಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
- ಪ್ರಶ್ನೆ ಪತ್ರಿಕೆ ಸಿಕ್ಕಿದ ತಕ್ಷಣ ಅದನ್ನು ಓದಲು ಸಮಯ ತೆಗೆದುಕೊಳ್ಳಿ. ಯಾವುದಾದರು ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲದಿದ್ದಲ್ಲಿ ಗಾಬರಿ ಆಗಬೇಡಿ.
- ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯ ಪ್ರಕಾರ ಉತ್ತರ ಬರೆಯಿರಿ. ಉತ್ತರ ತಿಳಿದಿಲ್ಲದಿದ್ದಲ್ಲಿ ಅದಕ್ಕೆ ಬೇಕಾಗುವಷ್ಟು ಜಾಗವನ್ನು ಬಿಟ್ಟು ಮುಂದಿನ ಪ್ರಶೆಯನ್ನು ಉತ್ತರಿಸಿ.
- ಕಡಿಮೆ ಅಂಕದ ಪ್ರಶ್ನೆಗೆ ಜಾಸ್ತಿ ಸಮಯ ವ್ಯಯ ಮಾಡಬೇಡಿ. ಹೆಚ್ಚಿನ ಅಂಕದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಯಾವುದಕ್ಕೂ ಸಮಯದ ಬಗ್ಗೆ ಗಮನವಿರಲಿ.
- ಎಕ್ಸ್ಟ್ರಾ ಶೀಟ್ ಬೇಕಿದ್ದಲ್ಲಿ ಕೇಳಿ ಪಡೆಯಿರಿ, ಹಿಂಜರಿಕೆ ಬೇಡ.
- ಪರೀಕ್ಷೆಗೆ ಹೋಗುವಾಗ ಮತ್ತು ಬರೆದು ಬರುವಾಗ ಯಾವುದೇ ಕಾರಣಕ್ಕೂ ಬರೆದಿರುವ ಪರೀಕ್ಷೆಯ ಕುರಿತು ಯಾರೊಂದಿಗೆ ಚರ್ಚಿಸಬೇಡಿ.
- ಕೊನೆಯ 10 ನಿಮಿಷಗಳನ್ನು ಉಳಿಸಿಕೊಂಡು ಬರೆದ ಉತ್ತರ, ರಿಜಿಸ್ಟರ್ ನಂಬರ್ ಸರಿಯಾಗಿದೆಯೇ ಎಂದು ಮರು ಪರೀಕ್ಷಿಸಿಕೊಳ್ಳಿ.
TOP 14 News | ಶಿವಮೊಗ್ಗದ ಇಂದಿನ ಬಿಸಿ ಬಿಸಿ ಸುದ್ದಿಗಳೇನು? ಕ್ಲಿಕ್ ಮಾಡಿ ಓದಿ