ಮುಖ್ಯಮಂತ್ರಿಗೆ ಸಿಗಂದೂರು ಶಾಪ ತಟ್ಟಿದೆ, ಸಂಕ್ರಮಣದವರೆಗೆ ಕಾದು ನೋಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿಗಂದೂರು ವಿಚಾರಕ್ಕೆ ಕೈಹಾಕಿದವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದೆ. ಅದು ನಿಜವಾಗÀುತ್ತಿದೆ. ಸಂಕ್ರಮಣದ ನಂತರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಭವಿಷ್ಯ ನುಡಿದಿದ್ದಾರೆ.

ಇದು ವಿಶ್ವದಲ್ಲೇ ವಿಶಿಷ್ಟ ಹಾರ್ಟ್ ಸರ್ಜರಿ

ಯಡಿಯೂರಪ್ಪ ಅವರಿಗೆ ಡಿನೋಟಿಫೈ ರೂಪದ ಶಾಪ ತಟ್ಟಿದೆ. ಇಂತಹ ಆರೋಪ ಎದುರಿಸಿದ ಬಳಿಕ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ, ದಾಖಲೆಗಳನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಸಂಚಲನ: ಉಮೇಶ್ ಕತ್ತಿ, ಕಟ್ಟಾ ಸುಬ್ರಮಣ್ಯ, ಬಸನಗೌಡ ಪಾಟೀಲ್ ಯತ್ನಾಳ್ ಮುಂತಾದವರೆಲ್ಲ ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದಾರೆ. ನಾಯಕತ್ವದ ಬಗ್ಗೆ ಬಿಜೆಪಿಯಲ್ಲಿ ತಿಕ್ಕಾಟವಿದೆ. ಸಂಚಲನ ನಡೆದಿದೆ. ಆದ್ದರಿಂದ ಸಂಕ್ರಮಣದ ಬಳಿಕ ಯಡಿಯೂರಪ್ಪ ಅಧಿಕಾರದಲ್ಲಿ ಉಳಿಯುವುದು ಅನುಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಶ್ರೀಧರ್ ಹುಲ್ತಿಕೊಪ್ಪ ಉಪಸ್ಥಿತರಿದ್ದರು.

ಬಿ.ಎಸ್.ವೈ ನೇತೃತ್ವದ ಸರ್ಕಾರಕ್ಕೆ ಕಣ್ಣು ಮತ್ತು ಕಇವಿ ಇಲ್ಲ. ಸಿಎಂ ನೆನಪಿನ ಶಕ್ತಿಯೂ ಕಡಿಮೆಯಾಗಿದೆ. ಯುವಪೀಳಿಗೆಯನ್ನು ಪಕ್ಷದಲ್ಲಿ ಕಡೆಗಾಣಿಸಲಾಗುತ್ತಿದೆ.ಸರ್ಕಾರದ ಪತನ ಖಚಿತ.
– ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

 

error: Content is protected !!