Property details | ವಿಜಯೇಂದ್ರ, ಮಧು, ಕುಮಾರ, ಬೇಳೂರು ಆಸ್ತಿ ಎಷ್ಟು? ಬಹುಕೋಟಿ ಒಡೆಯರಿವರು

Nomination

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು. ಅವರು ಅಧಿಕೃತವಾಗಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಅದರಲ್ಲಿ ಪ್ರಮುಖರ ಪಟ್ಟಿ ಕೆಳಗಿನಂತಿದೆ. ವಿಶೇಷವೆಂದರೆ, ಬೇಳೂರ್’ಗೆ ಸ್ವಂತ, ಮನೆ, ಜಮೀನು ಇಲ್ಲ. ವಿಜಯೇಂದ್ರ ಅವರು ₹35 ಕೋಟಿಯಷ್ಟು ಸಾಲವಿದೆ. 

READ | 15 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ, ಸೊರಬದಲ್ಲಿ ಬ್ರದರ್ಸ್ ಹವಾ, ಕಾಗೋಡು ಕಾಲಿಗೆ ಬಿದ್ದ ಬೇಳೂರು, ಉಳಿದೆಡೆ ಹೇಗಿತ್ತು?

  • ವಿಜಯೇಂದ್ರ ₹126 ಕೋಟಿ ಒಡೆಯ
    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಪುತ್ರ. ಬಿ.ವೈ.ವಿಜಯೇಂದ್ರ (BY Vijayendra) ಅವರು ಅಫಿಡೇವಿಟ್ ಸಲ್ಲಿಸಿದ್ದು, ಅವರು ಅಧಿಕೃತವಾಗಿ ಘೋಷಿಸಿರುವಂತೆ ಒಟ್ಟು ₹126.16 ಕೋಟಿ ಆಸ್ತಿ ಹೊಂದಿದ್ದಾರೆ‌. ಅದರಲ್ಲಿ ಚರಾಸ್ತಿ ₹56 ಕೋಟಿ, ಸ್ಥಿರಾಸ್ತಿ ₹70 ಕೋಟಿ ಆಸ್ತಿ‌ ಇದೆ. ₹35 ಕೋಟಿ ಸಾಲವಿದೆ.
  • ಮಧು ಬಂಗಾರಪ್ಪ ₹69 ಕೋಟಿ ಆಸ್ತಿ
    ಮಾಜಿ ಶಾಸಕ ಮಧು ಬಂಗಾರಪ್ಪ(Madhu Bangarappa) ₹69.50 ಕೋಟಿ ಆಸ್ತಿ‌ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರ ಆಸ್ತಿ ₹66 ಕೋಟಿ ಎಂದು ಘೋಷಿಸಿದರು.
  • ಕುಮಾರ್ ಬಂಗಾರಪ್ಪ ಆಸ್ತಿ ಡಬಲ್
    ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು ಒಟ್ಟು ₹65.30 ಕೋಟಿ ಆಸ್ತಿ‌ ಘೋಷಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಘೋಷಿಸಿದ ಆಸ್ತಿ ವಿವರಕ್ಕೆ ಹೋಲಿಕೆಯಲ್ಲಿ ಆಸ್ತಿ ಡಬಲ್ ಆಗಿದೆ. ₹1.12 ಕೋಟಿ ಸಾಲವಿದೆ.
  • ಬೇಳೂರು ₹4.76 ಕೋಟಿ ಆಸ್ತಿ
    ಬೇಳೂರು‌ ಗೋಪಾಲಕೃಷ್ಣ (Beluru Gopalakrishna) ಕಾಂಗ್ರೆಸ್ ಪಕ್ಷದಿಂದ ಸಾಗರ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರು 2013ರಲ್ಲಿ 1.63 ಕೋಟಿ ಆಸ್ತಿ ಘೋಷಿಸಿದ್ದರು. ಈಗ ₹4.76 ಆಸ್ತಿ ಇದೆ. ಇದರಲ್ಲಿ ಚರಾಸ್ತಿ ₹3.26 ಕೋಟಿ, ಸ್ಥಿರಾಸ್ತಿ ₹1.50 ಕೋಟಿ ಇದೆ. ವಿಶೇಷವೆಂದರೆ, ಇವರ ಬಳಿ ಸ್ವಂತದ ಮನೆ ಮತ್ತು ಜಮೀನು ಇಲ್ಲ.

Jagadish shettar | ಜಗದೀಶ್ ಶೆಟ್ಟರ್’ಗೆ ಬಹಿರಂಗ ಪತ್ರ ಬರೆದ ಈಶ್ವರಪ್ಪ, ಕೇಳಿದ 5 ಪ್ರಮುಖ ಪ್ರಶ್ನೆಗಳಿವು

error: Content is protected !!