BJP candidate | ಮುಂದುವರಿದ ಶಿವಮೊಗ್ಗ ಸಿಟಿ ಟಿಕೆಟ್ ಸಸ್ಪೆನ್ಸ್, ಮೂರನೇ ಲಿಸ್ಟ್’ನಲ್ಲೂ ಇಲ್ಲ ಹೆಸರು, ಇಂದು‌ ಅಭ್ಯರ್ಥಿ ಘೋಷಣೆ?

BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜಕೀಯ ಶಕ್ತಿ ಕೇಂದ್ರ ಶಿವಮೊಗ್ಗ ನಗರದ ಟಿಕೆಟ್ ಸಸ್ಪೆನ್ಸ್ ಮುಂದುವರಿದಿದೆ. ಯಾರಿಗೆ ಟಿಕೆಟ್ ಸಿಗಲಿದೆ? ಆ ‘ಅಚ್ಚರಿ ಅಭ್ಯರ್ಥಿ’ ಯಾರು? ಇತ್ಯಾದಿ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಹಲವರ ಹೆಸರುಗಳು ಕೇಳಿ ಬರುತ್ತಿದ್ದು ಟಿಕೆಟ್ ಯಾರ ಕೈವಶವಾಗಲಿದೆ ಎಂಬ ಕುತೂಹಲಕ್ಕೆ ಇಂದು ಬ್ರೇಕ್ ಬೀಳುವ ಸಾಧ್ಯತೆ ಇದೆ.

READ | 15 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ, ಸೊರಬದಲ್ಲಿ ಬ್ರದರ್ಸ್ ಹವಾ, ಕಾಗೋಡು ಕಾಲಿಗೆ ಬಿದ್ದ ಬೇಳೂರು, ಉಳಿದೆಡೆ ಹೇಗಿತ್ತು?

ಮೂರನೇ ಪಟ್ಟಿಯಲ್ಲಾದರೂ ಶಿವಮೊಗ್ಗ ನಗರದ ಅಭ್ಯರ್ಥಿ ಹೆಸರು ಘೋಷಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ಅದೂ ಹುಸಿಯಾಗಿದೆ. ಶಾಸಕ‌ ಕೆ.ಎಸ್.ಈಶ್ವರಪ್ಪ ಅವರ ಬಳಿಕ ಯಾರಿಗೆ ಟಿಕೆಟ್ ನೀಡಬಹುದೆಂಬ ಕುತೂಹಲ ಕಾರ್ಯಕರ್ತರಾದಿಯಾಗಿ ಎಲ್ಲರಲ್ಲೂ ಇದೆ.
ಶಿವಮೊಗ್ಗ ಜಿಲ್ಲೆಯ ಆರೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿಯಾಗಿದೆ. ಆದರೆ, ಶಿವಮೊಗ್ಗ ನಗರದ ಅಭ್ಯರ್ಥಿ ವಿಚಾರದಲ್ಲಿ ಭಾರೀ ಗುಪ್ತತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದ್ದು, ಹೈಕಮಾಂಡ್ ಹೊಸಬರಿಗೆ ಮಣೆ ಹಾಕಲಿದೆಯೋ? ಅಥವಾ ಅಚ್ಚರಿಯ ಅಭ್ಯರ್ಥಿ ಮುನ್ನೆಲೆಗೆ ಬರಲಿದೆಯೋ ಇದೆಲ್ಲದಕ್ಕೂ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಹೆಚ್ಚು ದಿನ ಸಹ ಉಳಿದಿಲ್ಲ. ಅದಕ್ಕಾಗಿ ಪಕ್ಷದ ವರಿಷ್ಠರು ಶೀಘ್ರ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

BJP ticket | ಶಿವಮೊಗ್ಗದ 6 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್, ಒಂದು ಕ್ಷೇತ್ರ ಸಸ್ಪೆನ್ಸ್

error: Content is protected !!