ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆ ಏಳು ವಿಧಾನಸಭೆ ಕ್ಷೇತ್ರ(Assembly constituency) ಗಳಲ್ಲಿ ಆರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೊಂದು ಕ್ಷೇತ್ರದ ವಿಚಾರದಲ್ಲಿ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ.
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಉಳಿದ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದೆ.
READ | ಶಾಸಕ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪತ್ರ ವೈರಲ್ ಬೆನ್ನಲ್ಲೇ, ಅವರ ಮನೆಯ ಮುಂದೆ ಸೇರಿದ ಜನವೋ ಜನ
ಶಿವಮೊಗ್ಗದ ಕ್ಷೇತ್ರಗಳು ಹಾಗೂ ಅಭ್ಯರ್ಥಿ ಹೆಸರು
- ಭದ್ರಾವತಿ – ಮಂಗೋಟಿ ರುದ್ರೇಶ್ (Mangoti Rudresh)
- ತೀರ್ಥಹಳ್ಳಿ -ಆರಗ ಜ್ಞಾನೇಂದ್ರ (Aaraga Jnanendra)
- ಶಿಕಾರಿಪುರ -ಬಿ.ವೈ.ವಿಜಯೇಂದ್ರ (BY Vijayendra)
- ಸೊರಬ -ಕುಮಾರ್ ಬಂಗಾರಪ್ಪ (Kumar Bangarappa)
- ಸಾಗರ – ಹರತಾಳು ಎಚ್.ಹಾಲಪ್ಪ (Harathalu H.Halappa)
- ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರ- ಕೆ.ಬಿ.ಅಶೋಕ್ ನಾಯ್ಕ (KB Ashok naik)
ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿರುವುದರಿಂದ ಇದುವರೆಗೆ ಈ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
KS Eshwarappa Resign | ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ರಾಜೀನಾಮೆ ಘೋಷಣೆ, ಇಂಥದ್ದೊಂದು ಪತ್ರ ವೈರಲ್