ಮುನ್ಸೂಚನೆ ನೀಡದೇ ಕಬ್ಬಿಣದ ದರ ಏರಿಕೆ, ರೊಚ್ಚಿಗೆದ್ದ ವೆಲ್ಡಿಂಗ್ ಅಸೋಸಿಯೇಶನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಬ್ಬಿಣದ ಉತ್ಪಾದಕ ಕಾರ್ಖಾನೆಗಳು ಮತ್ತು ಸಗಟು ಕಬ್ಬಿಣದ ಅಂಗಡಿಗಳು ಮುನ್ಸೂಚನೆ ನೀಡದೇ ಪ್ರತಿ ಟನ್‍ಗೆ 15 ರಿಂದ 22 ಸಾವಿರ ರೂಪಾಯಿವರೆಗೆ ದರವನ್ನು ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ವೆಲ್ಡಿಂಗ್ ಅಸೋಸಿಯೇಷನ್ ಸೋಮವಾರ ಪ್ರತಿಭಟನೆ ನಡೆಸಿತು.

ಭದ್ರಾ ಎಡನಾಲೆಗೆ ನೀರು ಬಿಡಲು ಕೇಳುತ್ತಿರುವುದೇಕೆ?

ಕಬ್ಬಿಣ ಸಲಕರಣೆ ತಯಾರಿಸುವವರ ಪಾಲಿಗೆ ಈ ಉದ್ಯಮವೇ ಬದುಕಿಗೆ ಆಧಾರ. ಏಕಾಏಕಿ ಕಬ್ಬಿಣದ ದರವನ್ನು ಹೆಚ್ಚಿಸಿದ್ದ ಪರಿಣಾಮ ಭಾರಿ ಸಮಸ್ಯೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಕ ಕೈಗಾರಿಕಾ ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಚಿವರು ಮಧ್ಯ ಪ್ರವೇಶಿಸಿ ದರ ನಿಗದಿಗೆ ಸಂಬಂಧಪಟ್ಟಂತೆ ತಾರತಮ್ಯ ಸರಿಪಡಿಸಿ ಸರ್ಕಾರದಿಂದ ದರ ನಿಗದಿಮಾಡಿದ ಪಟ್ಟಿಯನ್ನು ಪ್ರಕಟಿಸಬೇಕು. ಕಬ್ಬಿಣ ಸಲಕರಣೆ ತಯಾರಕರಿಗೆ ಆಗಬಹುದಾದ ಆರ್ಥಿಕ ನಷ್ಟವನ್ನು ಸರಿಪಡಿಸಬೇಕು.
– ರವಿಕುಮಾರ್, ಅಸೋಸಿಯೇಶನ್ ಮುಖಂಡ

ಈ ಮೊದಲು ಎಷ್ಟಿತ್ತು?: ಈ ಮೊದಲು ಪ್ರತಿ ಟನ್ ಕಬ್ಬಿಣಕ್ಕೆ 30 ರಿಂದ 50 ಸಾವಿರ ರೂಪಾಯಿ ಇತ್ತು. ಈಗ 15ರಿಂದ 22ಸಾವಿರ ರೂ.ವರೆಗೆ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿ ಟನ್‍ಗೆ 50 ರಿಂದ 75 ಸಾವಿರ ರೂಪಾಯಿ ದರ ಏರಿಕೆ ಆದಂತಾಗಿದೆ. ಕಬ್ಬಿಣದ ಅಗತ್ಯ ವಸ್ತುಗಳ ಯಾವುದೇ ದರಪಟ್ಟಿ ಪ್ರಕಟಿಸದೇ ದರ ಹೆಚ್ಚಳ ಮಾಡಿರುವುದರಿಂದ ನಾವುಗಳು ಈಗಾಗಲೆ ಮುಂಗಡವಾಗಿ ಹಣ ಪಡೆದು ಕೆಲಸ ಮಾಡುತ್ತಿರುವುದರಿಂದ ತುಂಬಾ ನಷ್ಟವಾಗಿ ನಾವುಗಳು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಈ ಮೂರು ಸಿಟಿಗಳ ಹೆಸರು ರೆಕೆಮೆಂಡ್

ಪ್ರತಿಭಟನೆಯಲ್ಲಿ ವೆಂಕಟೇಶ್, ಮೊಹಮ್ಮದ್ ರಫಿಕ್, ಮನೋಹರ್, ಅಬ್ದುಲ್ ಸಲಾಂ, ಜವಾಜ್ ಅಹಮ್ಮದ್, ಜಿಯಾವುಲ್ಲಾ, ಫೈರೋಜ್, ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!