SSLC Result | ರಾಜ್ಯದ ಟಾಪರ್ ಪಟ್ಟಿಯಲ್ಲಿ ತೀರ್ಥಹಳ್ಳಿ ವಿದ್ಯಾರ್ಥಿ, ಅಪ್ಪ-ಅಮ್ಮ ಇಬ್ಬರೂ ಟೀಚರ್

Tirthahalli map

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಮವಾರ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. 624 ಅಂಕ ಗಳಿಸಿರುವ ತೀರ್ಥಹಳ್ಳಿ ವಿದ್ಯಾರ್ಥಿ ರಾಜ್ಯದ ಟಾಪರ್ ಪಟ್ಡಿಯಲ್ಲಿ ಸ್ಥಾನ ಪಡೆದಿದ್ದಾರೆ.

READ | ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಎಷ್ಟನೇ ಸ್ಥಾನ ಪಡೆದಿದೆ? ರಾಜ್ಯದ ಟಾಪ್ 4 ವಿದ್ಯಾರ್ಥಿಗಳ್ಯಾರು?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿಟ್ಟೆಬೈಲಿನಲ್ಲಿರುವ ಪ್ರಜ್ಞಾಭಾರತಿ ಆಂಗ್ಲ‌ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎಚ್.ಎಸ್.ಅಮಿತ್ ಶಾಸ್ತ್ರಿ 624 ಅಂಕ ಗಳಿಸಿದ್ದಾರೆ.
ಶಿವಪ್ರಸಾದ್ ಮತ್ತು ವೀಣಾ ಅವರ ಪುತ್ರ ಅಮಿತ್ ಅವರು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ದಂಪತಿ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ.
ರಾಜ್ಯದಲ್ಲಿ ಬೆಂಗಳೂರಿನ ಹೊಸೂರು‌ ರಸ್ತೆಯಲ್ಲಿರುವ ನ್ಯೂ ಮೆಕಲೆ ಇಂಗ್ಲಿಷ್ ಶಾಲೆಯ ಭೂವಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಶಾಲೆಯ ಯಶಸ್ ಗೌಡ, ಸವದತ್ತಿಯ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್, ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆಯ ಭೀಮನಗೌಡ ಹನುಮಂತಗೌಡ ಪಾಟೀಲ್ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

 

error: Content is protected !!