Congress | ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿ 36 ಜನರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

congress 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ‌ ಕೆ.ಬಿ.ಪ್ರಸನ್ನ ಕುಮಾರ್ ಸೇರಿ 36 ಜನರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಚ್.ಸುಂದರೇಶ್, ಕಾಂಗ್ರೆಸ್ ಅಭ್ಯರ್ಥಿ ಎಚ್‌.ಸಿ.ಯೋಗೇಶ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

READ | ಮೇ 13ರಂದು ಶಿವಮೊಗ್ಗ ನಗರದಲ್ಲಿ‌ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

ಉಚ್ಛಾಟನೆಗೆ ಕಾರಣವೇನು?
ಈ ಬಾರಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತಹ ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಮತ್ತು ಮುಖಂಡರುಗಳು ಕಾಂಗ್ರೆಸ್ ಪರವಾಗಿ ಚುನಾವಣೆ ಮಾಡದೇ ಬಹಳಷ್ಟು ಜನರು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಳಕಂಡವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಯಾರಿಗೆಲ್ಲ ಉಚ್ಛಾಟನೆ?
ಕೆ.ಬಿ. ಪ್ರಸನ್ನಕುಮಾರ್, ದೀಪಕ್ ಸಿಂಗ್, ಕೆ.ಟಿ.ಚಂದ್ರಶೇಖರ್, ಎಚ್.ಎಚ್.ಮಂಜುನಾಥಗೌಡ, ಮುಕ್ತಿಯಾರ್ ಅಹಮದ್, ರಾಘವೇಂದ್ರ ಭಾರದ್ವಜ್, ಸೈಯದ್ ಮುಜೀಬ್, ನೂರುಲ್ಲಾ, ರಘು ಬಾಲರಾಜ್, ಆನ್ಸರ್ ಅಹಮ್ಮದ್, ಶಾರದಮ್ಮ, ಸಂಜಯ್ ಕಶ್ಯಪ್, ಮುಟ್ಟು,‌ ಆರೀಫ್,‌ ಮಂಜುನಾಥ್ (ಬೊಮ್ಮನಕಟ್ಟೆ), ನಿಹಾಲ್‌ (ಸೋಶಿಯಲ್ ಮಿಡಿಯಾ), ಫರ್‌ದ್ದೀನ್, ವೈ.ಎಚ್. ನಾಗರಾಜ್, ಶಾರೂಖ್, ರೇಷ್ಮಾ (ಹೊಸಮನೆ), ಶೈಹಬು,‌ ಪೈರೋಜ್,‌ ಆಸೀಫ್, ರಮೇಶ ರೆಡ್ಡಿ, ಆಟೋ ಮುಜೀಬ್, ಸೈಮನ್, ರಫೀಕ್, ರವಿ (ಟ್ಯಾಂಕ್ ಮೊಹಲ್ಲಾ), ಐಡಿಯಲ್ ಗೋಪಿ, ಷಣ್ಮುಖ, ಪ್ರತಿಭಾ, ಸೈಯದ್ ವಾಹಿದ್ ಅಡ್ಡು, ಕೆ.ವಿ.ಕವಿತಾ ಇತರರು.

SSLC Result | ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಎಷ್ಟನೇ ಸ್ಥಾನ ಪಡೆದಿದೆ? ರಾಜ್ಯದ ಟಾಪ್ 4 ವಿದ್ಯಾರ್ಥಿಗಳ್ಯಾರು?

error: Content is protected !!