MLA Office | ಬಿಜೆಪಿ ಶಾಸಕರ ಕಚೇರಿ ಉದ್ಘಾಟನೆ, ಫ್ಲೆಕ್ಸ್’ನಲ್ಲಿ ಸಿದ್ದರಾಮಯ್ಯ ಚಿತ್ರ?

Chenni BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ (ಚನ್ನಿ) ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆದಿದೆ. ಆದರೆ, ವೇದಿಕೆ ಕಾರ್ಯಕ್ರಮಕ್ಕಾಗಿ ಫ್ಲೆಕ್ಸ್ ಹಾಕಿಸಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರ ಚಿತ್ರವನ್ನೂ ಹಾಕಲಾಗಿದೆ. ಇದು ಶಿವಮೊಗ್ಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

READ | ಕರ್ನಾಟಕ ಕ್ಯಾಬಿನೆಟ್ ರಚನೆ, ಯಾರಿಗೆ ಯಾವ ಖಾತೆ ಹಂಚಿಕೆ, ಮಧುಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಫ್ಲೆಕ್ಸ್’ನಲ್ಲಿ ಮೊದಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಕುಮಾರ್ ಸೇರಿದಂತೆ ಮೇಯರ್, ಉಪ ಮೇಯರ್ ಚಿತ್ರಗಳನ್ನು ಹಾಕಲಾಗಿದೆ.

error: Content is protected !!