ಮತ ಎಣಿಕೆ ಕೇಂದ್ರದ ಹೊರಗೆ ಸರ್ಕಾರದ ಮಾರ್ಗಸೂಚಿ ಧೂಳಿಪಟ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದೆ.

Click here | ಒಂದೇ ಕುಟುಂಬದ ನಾಲ್ವರಿಗೆ ರೂಪಾಂತರ ಕೊರೊನಾ, ಅವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ, ಕಸ ಸುರಿದಿದ್ದಕ್ಕೆ 3 ಸಾವಿರ ರೂ. ದಂಡ, ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ, ಮುಂದೇನಾಯ್ತು?

ಕೇಂದ್ರದ ಹೊರಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಅಲ್ಲಿ ದೈಹಿಕ ಅಂತರವಾಗಲೀ, ಮಾಸ್ಕ್ ಆಗಲಿ ತೊಟ್ಟಿಲ್ಲ.
ಕೋವಿಡ್ ಹಾಗೂ ರೂಪಾಂತರ ಕೋವಿಡ್ ಸೋಂಕಿನ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಮಾರ್ಗಸೂಚಿ ಅನ್ವಯವೇ ಚುನಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ, ಮತ ಎಣಿಕೆ ಕೇಂದ್ರದಲ್ಲಿಯೇ ಭಾರಿ ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮವೇ ಸೇರಿತ್ತು. ಆದರೆ, ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಗಿತ್ತು.

error: Content is protected !!