Drinking water | ಜುಲೈ 10ರೊಳಗೆ ಮಳೆಯಾಗದಿದ್ದರೆ ಶಿವಮೊಗ್ಗಕ್ಕೆ ಕಾದಿದೆ ಆಪತ್ತು

Water tap

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜುಲೈ 10ರೊಳೆಗೆ ಮಳೆ ಆಗದಿದ್ದರೆ ನಗರಕ್ಕೆ ನೀರು ಸಮಸ್ಯೆ ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr. R.Selvamani) ತಿಳಿಸಿದರು.
ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಟಾಸ್ಕ್ ಫೋರ್ಸ್ (Task Force) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಮಾಹಿತಿ ನೀಡಿದರು.

READ | ಹಣಗೆರೆಕಟ್ಟೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನ ಫುಲ್ ರಶ್, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಪೂಜೆ ಸಲ್ಲಿಸಲು ನೂಕುನುಗ್ಗಲು

ಮಳೆ ಸಣ್ಣ ಪ್ರಮಾಣದಲ್ಲಿ ಹೊಸನಗರ (Hosanagar) ಮತ್ತು ತೀರ್ಥಹಳ್ಳಿ(Thirthahalli) ಯಲ್ಲಿ ಆಗಿದೆ. ಕರಾವಳಿ (Coastal area) ಕೊಡಗು(Kodagu) ದಲ್ಲಿ ಮಳೆಯಾಗುತ್ತಿದೆ. ಚಿಕ್ಕಮಗಳೂರು  (Chikkamagaluru) ಮತ್ತು ಶಿವಮೊಗ್ಗ(Shimoga)ದಲ್ಲಿ ಮೂರು ದಿನದ ನಂತರ ಮಳೆಯಾಗುವ ನಿರೀಕ್ಷೆ ಇದೆ ಎಂದರು.
ಸೊರಬ(sorab)ದಲ್ಲಿ ಎರಡು ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದೆ. ತೀರ್ಥಹಳ್ಳಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

KDP
ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಟಾಸ್ಕ್ ಫೆÇೀರ್ಸ್ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಶಿವಮೊಗ್ಗ ನಗರಕ್ಕೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನೀರು ಸರಬರಾಜು ಮಾಡುತ್ತಿದ್ದು 20 ದಿನಕ್ಕೆ ನೀರಿನ ಸಮಸ್ಯೆ ಇಲ್ಲ. ಟ್ರಂಚ್ ತೆಗೆಯಲು ನೀರು ತೆಗೆದು ಕೆಲವು ವಾರ್ಡ್‍ಗಳಿಗೆ ದಿನಬಿಟ್ಟು ದಿನ ನೀರು ಹಂಚಿಕೆಗೆ ಯೋಜನೆ ರೂಪಿಸಲಾಗುತ್ತಿದೆ.
ಮಾಯಣ್ಣ ಗೌಡ, ಪಾಲಿಕೆ ಆಯುಕ್ತರು

ಈ ಹಿಂದೆ ಅಮೃತ್ ಯೋಜನೆಯಲ್ಲಿ ಮೂರು ಯೋಜನೆ ಕುಡಿಯುವ ನೀರಿಗೆ ಶಾಶ್ವತ ಕುಡಿಯುವ ನೀರಿಗೆ ಒಪ್ಪಿಗೆ ದೊರೆತಿದೆ. 1 ಲಕ್ಷ ಕಡಿಮೆ ಜನಸಂಖ್ಯೆಗೆ ಅಮೃತ್ ಯೋಜನೆ ಅನ್ವಯವಾಗುತ್ತದೆ. ಆನವಟ್ಟಿ ಮತ್ತು ಸೊರಬಕ್ಕೆ ಶಾಶ್ವತ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ಒದಗಿದುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

READ | ನೀರಾವರಿ ಇಲಾಖೆ ಇಇ ಪತ್ನಿ ಅನುಮಾನಾಸ್ಪದ ಸಾವು

ಮಧು ಬಂಗಾರಪ್ಪ ನೀಡಿದ ಸೂಚನೆಗಳಿವು

  • ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಈ ಬಾರಿ ಮಳೆಯಾಗಿಲ್ಲ. ಹೀಗಾಗಿ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಇದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು.
  • ಭದ್ರಾವತಿಯಲ್ಲಿ 25 ಟಿಎಂಸಿ ಭದ್ರಾವತಿಗೆ ಬೇಕು. ಭದ್ರಾ ಜಲಾಶಯದಲ್ಲಿ 65 ಟಿಎಂಸಿ ನೀರು ಸಂಗ್ರಹವಿದೆ. ಮಳೆಯಾಗದಿದ್ದರೂ ಭದ್ರಾವತಿಯಲ್ಲಿ 60 ದಿನ ಕುಡಿಯುವ ನೀರಿನ ಸಮಸ್ಯೆ ಇಲ್ಲ.
  • ಸಾಗರದಲ್ಲಿ 17 ದಿನಕ್ಕಾಗುವಷ್ಟು ಮಾತ್ರ ನೀರಿದೆ. ಶಿಕಾರಿಪುರದಲ್ಲಿ 1 ತಿಂಗಳು ಸಮಸ್ಯೆ ಇಲ್ಲ. ಬೋರ್ ನೀರಿನಿಂದ ನೀರು ನಿರ್ವಹಣೆ ಆಗ್ತಾ ಇದೆ.
  • ಶಿರಾಳಕೊಪ್ಪದಲ್ಲಿ 38 ಬೋರ್‍ನಲ್ಲಿ 36 ಬೋರ್ ಕಾರ್ಯನಿರ್ವಹಿಸುತ್ತಿವೆ. ಆದರೆ, ಬೋರ್ ನೀರು ಕಡಿಮೆ ಆಗುತ್ತಿದೆ. ಟ್ಯಾಂಕರ್ ಮತ್ತು ಬೋರ್‍ನಲ್ಲಿ ನೀರು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
  • 10 ಸ್ಥಳೀಯ ಸಂಸ್ಥೆಯಿಂದ ಕುಡಿಯುವ ನೀರಿನ ಯೋಜನೆ ಪ್ಲ್ಯಾನ್ ಮಾಡಲಾಗಿದೆ. ಕೆಲ ಶಾಶ್ವತ ಯೋಜನೆ ಇದ್ದರೆ ಅದನ್ನು ಕೈಗೆತ್ತಿಕೊಳ್ಳಲು ಅಭ್ಯಂತರವಿಲ್ಲ.

ಸಭೆಯಲ್ಲಿ ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಎಸ್.ಪಿ. ಜಿ.ಕೆ. ಮಿಥುನ್ ಕುಮಾರ್ ಉಪಸ್ಥಿತರಿದ್ದರು.

NES | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ವಸಿಷ್ಠ ಸಿಂಹ, ಗಂಗಾವತಿ ಪ್ರಾಣೇಶ್, ಡಾ.ವೀರೇಂದ್ರ ಹೆಗ್ಗಡೆ, ವಿಶೇಷ ಕಾರ್ಯಕ್ರಮಗಳೇನು?

error: Content is protected !!