Gajanur Dam | ಗಾಜನೂರು ಡ್ಯಾಂ ತುಂಬಲು 1 ಅಡಿ ಬಾಕಿ, ಇಂದು ಗೇಟ್ ಓಪನ್ ಸಾಧ್ಯತೆ, ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟವೆಷ್ಟಿದೆ?

Gajanur Dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗಾಜನೂರು ಜಲಾಶಯ (Gajanur dam) ಭರ್ತಿಯಾಗಲು ಇನ್ನೂ ಎರಡು ಅಡಿಯಷ್ಟೇ ಬಾಕಿ ಇದ್ದು, ಮಲೆನಾಡು ಭಾಗದಲ್ಲಿ ಮಳೆ ಇದೇ ರೀತಿ ಮುಂದುವರಿದರೆ ಸಂಜೆಯೊಳಗೆ ಡ್ಯಾಂನಿಂದ ನೀರು ಹೊರಬಿಡುವ ಸಾಧ್ಯತೆ ಇದೆ.

READ | ಇಬ್ಬರನ್ನು ಬಲಿ ಪಡೆದ, ವೈದ್ಯನ ಮೇಲೆ ಹಲ್ಲೆ ಮಾಡಿದ ‘ಅಭಿಮನ್ಯು’ ರಿಲೀಸ್!

ತುಂಗಾನದಿಯ (Tunga River) ಪೂರ್ಣ ಮಟ್ಟ 588.24 ಅಡಿಯಿದ್ದು, ಪ್ರಸ್ತುತ 587.24 ಅಡಿ ನೀರಿದೆ. 4830 ಕ್ಯೂಸೆಕ್ಸ್ ಒಳಹರಿವು ಇದೆ. ಒಳಹರಿವಿನ ಪ್ರಮಾಣವು 5 ಸಾವಿರಕ್ಕೆ ಏರಿದರೆ ಕ್ರಸ್ಟ್ ಗೇಟ್’ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗುವುದು. ಮಲೆನಾಡು ಪ್ರದೇಶದಲ್ಲಿ ಸೋನೆ ಮಳೆ ಸುರಿಯುತ್ತಿದ್ದು, ಒಳಹರಿವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ತುಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಇನ್ನಷ್ಟು ಮಳೆಯಾದರೆ ಕ್ರಸ್ಟ್ ಗೇಟ್’ಗಳನ್ನು ತೆರೆಯಲಾಗುವುದು. ಇದರಿಂದ ನದಿ ಪಾತ್ರದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು. ದನಕರುಗಳನ್ನು ನದಿಗೆ ಬಿಡುವುದು ಮಾಡಬಾರದು ಎಂದು ಎಚ್ಚರಿಸಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ (ಎಂಎಂಗಳಲ್ಲಿ)?
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 199.90 ಎಂಎಂ ಮಳೆಯಾಗಿದ್ದು, ಸರಾಸರಿ 28.56 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಎಂಎಂ ಇದ್ದು, ಇದುವರೆಗೆ ಸರಾಸರಿ 73.13 ಎಂಎಂ ಮಳೆ ದಾಖಲಾಗಿದೆ.
ಶಿವಮೊಗ್ಗ 10.50, ಭದ್ರಾವತಿ 8.50, ತೀರ್ಥಹಳ್ಳಿ 44.80, ಸಾಗರ 57.10, ಶಿಕಾರಿಪುರ 10.60, ಸೊರಬ 15.20, ಹಾಗೂ ಹೊಸನಗರ 53.20 ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
ಜಲಾಶಯ ಗರಿಷ್ಠ  ಇಂದಿನ ಮಟ ಒಳಹರಿವು(ಕ್ಯೂಸೆಕ್ಸ್)
ಲಿಂಗನಮಕ್ಕಿ  1819 1742.7 9237
ಭದ್ರಾ 186 137.2 2397
ತುಂಗಾ 588.24 587.54 4830
ಮಾಣಿ 595 (ಮೀ)  570.96 2195
ಪಿಕ್ ಅಪ್ 563.88 (ಮೀ) 561.82 829
ಚಕ್ರ 580.57(ಮೀ) 565.00(ಮೀ) 1541
ಸಾವೆಹಕ್ಲು 583.70 (ಮೀ)  572.78(ಮೀ) 1099

Shimoga rain | ಮಲೆನಾಡಿನಲ್ಲಿ ಭಾರೀ ಮಳೆ‌ಕೊರತೆ, ಶಿವಮೊಗ್ಗದಲ್ಲಿ ಎಷ್ಟು ಮಳೆಯಾಗಿದೆ? ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

error: Content is protected !!