ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಲ್ಲಿ ಮಳೆಯ ಆರ್ಭಟ ಆರಂಭವಾಗಿದ್ದು, ಆಗುಂಬೆಯಲ್ಲಿ ಸೋಮವಾರರಿಂದ ಮಂಗಳವಾರ ಬೆಳಗ್ಗೆವರೆಗೆ 124.02 ಎಂಎಂ ಮಳೆ ಸುರಿದರೆ, ಶರಾವತಿ ಹಿನ್ನೀರು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ.
ಆಗುಂಬೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದೇ ತುಂಗಾ, ಮಾಲತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಬರಿದಾಗಿದ್ದ ನದಿಗಳು ಜೀವಕಳೆಯಿಂದ ಕಂಗೊಳಿಸುತ್ತಿವೆ.
READ | ಭೀಕರ ಅಪಘಾತದಲ್ಲಿ ಕಾರು ನಜ್ಜುಗುಜ್ಜು, ಒಂದು ಸಾವು, ಮೃತರು ಎಲ್ಲಿಯವರು?
ಶರಾವತಿ ಕಣಿವೆಯಲ್ಲಿ ಮಳೆ
ಶರಾವತಿ ಕಣಿವೆ ಪ್ರದೇಶದಲ್ಲೂ ಧಾರಾಕಾರ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದ ಹಿನ್ನೀರಿನ ಪ್ರಮಾಣದಲ್ಲೂ ಸ್ವಲ್ಪ ಹೆಚ್ಚಾಗಿದೆ. ಮುಂಗಾರು ಕೊರತೆಯಿಂದ ಲಾಂಚ್ ನಲ್ಲಿ ವಾಹನಗಳ ಸಾಗಣೆಗೆ ಬ್ರೇಕ್ ಬಿದ್ದಿತ್ತು. ಬರೀ ಜನರನ್ನು ಮಾತ್ರ ಸಾಗಿಸಲಾಗುತ್ತಿತ್ತು. ಮಳೆ ಸುರಿಯದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಲಾಂಚ್ ಸ್ಥಗಿತಗೊಳ್ಳುವ ಭೀತಿ ಇತ್ತು. ಆದರೆ, ಮುಂಗಾರು ಚುರುಕುಗೊಂಡಿದ್ದು, ಆಶಾಭಾವನೆ ಮೂಡಿಸಿದೆ.