ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ನಡೆಸುತ್ತಿರುವ ಶ್ರೀ ಕಾಲಭೈರವ ವಸತಿ ಪ್ರೌಢ ಶಾಲೆಯಲ್ಲಿ ಮಾಜಿ ಸೈನಿಕರ ಮೀಸಲಾತಿಯಡಿ ಖಾಲಿ ಇರುವ ಸಹ ಶಿಕ್ಷಕ ಹುದ್ದೆಗೆ ಬಿ.ಎ., ಬಿ.ಇಡಿ. ವಿದ್ಯಾರ್ಹತೆ ಪಡೆದಿರುವ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
READ | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?
ಅರ್ಹ ಆಸಕ್ತ ಅಭ್ಯರ್ಥಿಗಳು ಸಂಬಂಧಿತ ಶೈಕ್ಷಣಿಕ ಹಾಗೂ ಮಾಜಿ ಸೈನಿಕರ ಮೂಲ ದಾಖಲೆಯೊಂದಿಗೆ ಜುಲೈ-13 ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಖುದ್ದಾಗಿ ಸಲ್ಲಿಸುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.