Tunga canal | ತುಂಗಾ ಎಡದಂಡೆ, ಬಲದಂಡೆ ನಾಲೆಗಳಿಗೆ ನೀರು ಹರಿಸಲು ದಿನಾಂಕ ನಿಗದಿ

Gajanur Dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24 ನೇ ಸಾಲಿನ ಮುಂಗಾರು ಬೆಳಗಳಿಗಾಗಿ ತುಂಗಾ ಅಣೆಕಟ್ಟು ಯೋಜನೆಯ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ಜುಲೈ 13 ರಿಂದ ನವೆಂಬರ್ 30ರವರೆಗೆ ನೀರು ಹರಿಸಲಾಗುವುದು ಎಂದು ತುಂಗಾ ಯೋಜನಾ ನೀರಾವರಿ ಅಧಿಕಾರಿ ಮತ್ತು ಕಾರ್ಯಪಾಲಕ ಇಂಜಿನಿಯರ್ ಬಿ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಶಿವಮೊಗ್ಗದಲ್ಲಿ ಬಂಜೆತನ ತಪಾಸಣಾ ಶಿಬಿರ, ಸುಪ್ರಸಿದ್ಧ ಸಂತಾನೋತ್ಪತ್ತಿ ತಜ್ಞರ ಆಗಮನ

ಕರ್ನಾಟಕ ನೀರಾವರಿ ಕಾಯ್ದೆ 1976(31), (1) ರ ಅದಿನಿಯಮದನ್ವಯ ಬೆಳೆ ಮಾದರಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಕಟ್ಟಡಗಳನ್ನು ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮ ಒಳಗಾಗುತ್ತಾರೆ. ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿರುತ್ತದೆ. ಪ್ರಕಟಿತ ಬೆಳೆಗಳನ್ನು ಬೆಳೆಯದೆ ಬೇರೆ ಬೆಳೆಗಳನ್ನು ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರಾಗಿದ್ದು, ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ. ರೈತ ಬಾಂಧವರು ನೀರಿನ ಸದ್ಬಳಕೆಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

Namaste Ghost | ಶಿವಮೊಗ್ಗಕ್ಕೆ ಆಗಮಿಸಿದ ‘ನಮಸ್ತೇ ಗೋಷ್ಟ್’ ಚಿತ್ರತಂಡ, ಶೇ.80ರಷ್ಟು ಮಲೆನಾಡಿನ ಪ್ರತಿಭೆಗಳ ನಟನೆಯಂತೆ

error: Content is protected !!