Shimoga rain | ಶಿವಮೊಗ್ಗದಲ್ಲಿ ವಾಡಿಕೆಯಷ್ಟು ಆಗಿಲ್ಲ ಮಳೆ, ಯಾವ ತಾಲೂಕಿನಲ್ಲಿ ಎಷ್ಟು ವರ್ಷಧಾರೆ? ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟು?

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 342.40 ಮಿಮಿ ಮಳೆಯಾಗಿದ್ದು, ಸರಾಸರಿ 48.91 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 670.49 ಮಿಮಿ ಮಳೆ ದಾಖಲಾಗಿದೆ.

READ |  ಶಿವಮೊಗ್ಗದಲ್ಲಿ ನಾಳೆಯಿಂದ ಹಾಫ್ ಹೆಲ್ಮೆಟ್ ಹಾಕುವಂತಿಲ್ಲ, ಕಾರಣವೇನು?

ತಾಲೂಕುವಾರು ಮಳೆ ಪ್ರಮಾಣ
ಶಿವಮೊಗ್ಗ 30.20 ಮಿಮಿ., ಭದ್ರಾವತಿ 26.60 ಮಿಮಿ., ತೀರ್ಥಹಳ್ಳಿ 64.20 ಮಿಮಿ., ಸಾಗರ 79.60 ಮಿಮಿ., ಶಿಕಾರಿಪುರ 30.20 ಮಿಮಿ., ಸೊರಬ 40.10 ಮಿಮಿ. ಹಾಗೂ ಹೊಸನಗರ 71.50 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 (ಗರಿಷ್ಠ), 1782.30 (ಇಂದಿನ ಮಟ್ಟ), 68645.00 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 1798.30.
ಭದ್ರಾ: 186 (ಗರಿಷ್ಠ), 155.30 (ಇಂದಿನ ಮಟ್ಟ), 24704.00 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 185.00.
ತುಂಗಾ: 588.24 (ಗರಿಷ್ಠ), 587.21 (ಇಂದಿನ ಮಟ್ಟ), 51950.00 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 (ಮೀಟರ್), 579.28 (ಇಂದಿನ ಮಟ್ಟ), 6705 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 584.00 (ಮೀಟರ್).
ಪಿಕ್‍ಅಪ್: 563.88 (ಮೀ.), 562.10 (ಇಂದಿನ ಮಟ್ಟ), 3381 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 562.44 (ಮೀ).
ಚಕ್ರ: 580.57 (ಮೀ), 574.28 (ಇಂದಿನ ಮಟ್ಟ), 3697.00 (ಒಳಹರಿವು), 1807.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 574.90 (ಮೀ).
ಸಾವೆಹಕ್ಲು: 583.70 (ಗರಿಷ್ಠ ಮೀ.), 580.18 (ಇಂದಿನ ಮಟ್ಟ), 2592.00 (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 576.38 (ಮೀ.)

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!