ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿವಿಎಸ್ ಶಾಲೆ ಮುಂಭಾಗದ ನೂರಡಿ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ಯುವಕರು ಹಾಗೂ ಬೈಕ್ ಮಾಲೀಕನಿಗೆ ದಂಡ ವಿಧಿಸಲಾಗಿದೆ.
ಬೈಕ್ ಚಾಲಕರಾದ ಇಲಿಯಾಸ್ ನಗರದ ಫೈಸಲ್ ಅಹ್ಮದ್ (20) ಎಂಬಾತನಿಗೆ ₹11 ಸಾವಿರ, ಟ್ಯಾಂಕ್ ಮೊಹಲ್ಲಾದ ಸೂಫಿಯಾನ್ ಖಾನ್ (21) ಎಂಬಾತನಿಗೆ ₹8 ಸಾವಿರ ಹಾಗೂ ಬೈಕ್ ಮಾಲೀಕ ಇಲಿಯಾಸ್ ನಗರದ ಮೊಹಮ್ಮದ್ ಸೈಫುಲ್ಲಾ (50) ಅವರಿಗೆ ₹4,500 ದಂಡ ವಿಧಿಸಿ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಮಾಯಪ್ಪ ಆದೇಶಿಸಿದರು.
ಯಾವಾಗ ನಡೆದಿತ್ತು ಘಟನೆ?
ಕಳೆದ ಆಗಸ್ಟ್ 15ರಂದು ನೂರಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎರಡು ಬೈಕ್ ಗಳಲ್ಲಿ ಅತೀ ವೇಗ ಹಾಗೂ ಅಜಾಗರೂಕವಾಗಿ ವ್ಹೀಲಿಂಗ್ ಮಾಡುತ್ತ ಬೈಕ್ ಚಲಾಯಿಸಿದ್ದರು. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿರುಮಲೇ್ಶ ಅವರು ಬೈಕ್ ಚಾಲರು ಹಾಗೂ ವಾಹನ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು.
Arecanut shell | ಅಡಿಕೆ ಬೆಳೆಗಾರರಿಗೆ ಶುಭಸುದ್ದಿ, ಶಬ್ದ ನಿರೋಧಕವಾಗಿಯೂ ಅಡಿಕೆ ಸಿಪ್ಪೆ ಬಳಕೆ!