Arecanut shell | ಅಡಿಕೆ ಬೆಳೆಗಾರರಿಗೆ ಶುಭಸುದ್ದಿ, ಶಬ್ದ ನಿರೋಧಕವಾಗಿಯೂ ಅಡಿಕೆ ಸಿಪ್ಪೆ ಬಳಕೆ!

Arecanut shell

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಸಿಪ್ಪೆ ಮೌಲ್ಯವರ್ಧನಕ್ಕೆ ದೇಶಾದ್ಯಂತ ನಾನಾ ಪ್ರಯತ್ನಗಳು ನಡೆದಿವೆ. ಅದಕ್ಕಾಗಿ ಸಂಶೋಧನೆಗಳು ಮಾಡಲಾಗುತ್ತಿದೆ. ಅಡಿಕೆ ಸಿಪ್ಪೆಯನ್ನು ಪೌಷ್ಟಿಕಾಂಶಯುಕ್ತ ಗೊಬ್ಬರವಾಗಿ ಈಗಾಗಲೇ ಹಲವೆಡೆ ಬಳಕೆ ಮಾಡಲಾಗುತ್ತಿದೆ. ಈ ನಡುವೆ ಇದರಿಂದ ಸೊಳ್ಳೆ ನಿಯಂತ್ರಣ ಕಾಯಿಲ್ ತಯಾರಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಶೇಷವೆಂದರೆ, ಸುರತ್ಕಲ್‍ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‍ಐಟಿಕೆ) ಸಂಶೋಧನಾ ವಿದ್ಯಾರ್ಥಿಗಳು ಅಡಿಕೆ ಸಿಪ್ಪೆಯಿಂದ ಶಬ್ದ ನಿರೋಧಕವಾಗಿಯೂ ಬಳಸುವ ಸಂಶೋಧನೆ ಕೈಗೊಂಡಿದ್ದಾರೆ.
ಮೀಟಿಂಗ್ ಹಾಲ್, ಮನೆ ಗಳಲ್ಲಿ ಅನಗತ್ಯವಾಗಿ ಕೇಳಿಬರುವ ಶಬ್ದವನ್ನು ಅಡಿಕೆ ಸಿಪ್ಪೆ ಬಳಸಿ ಶಬ್ದನಿರೋಧಕವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬ ವಿಚಾರ ಕಂಡುಕೊಂಡಿದ್ದಾರೆ.
ಸಂಶೋಧಿಸಿದ್ದು ಯಾರು?
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಪಿ.ಜಯರಾಜ್ ನೇತೃತ್ವದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಶಬ್ದ ನಿರೋಧಕ ಬೋರ್ಡ್ ಅನ್ನು ರಚಿಸುವ ಬಗ್ಗೆ ವರದಿಯಲ್ಲಿ ತಿಳಿಸಿದ್ದಾರೆ.

error: Content is protected !!