
ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಕೆಲಸಕ್ಕೆ ಹೋಗುವಾಗ ಎದುರುಗಡೆ ಬಂದ ವ್ಯಕ್ತಿಯೊಬ್ಬರು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ನೆಹರೂ ನಗರದ ವಾಸಿ ಸುನೀಲ್(28) ಎಂಬಾತನ ಮೇಲೆ ಭದ್ರಾವತಿಯ ಮುಬಾರಕ್ ಅಲಿಯಾಸ್ ಡಿಚ್ಚಿ(26) ಎಂಬಾತ ಹಲ್ಲೆ ಮಾಡಿದ್ದಾನೆ.
ಕೆಲಸಕ್ಕೆ ಹೋಗಲೆಂದು ಮನೆಯ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎದುರಿನಿಂದ ಬಂದ ಡಿಚ್ಚಿ ಏಕಾಏಕಿ ಸುನೀಲ್ ನನ್ನು ಅಡ್ಡಗಟ್ಟಿ ಎಡ ಗೈ, ಭುಜ ಮತ್ತು ತಲೆಗೆ ಕೈ ಯಿಂದ ಹಲ್ಲೆ ಮಾಡಿರುತ್ತಾನೆ.
ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.