ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೆಲ್ಮೆಟ್ ಧರಿಸದೇ ಮದ್ಯ ಸೇವಿಸಿ ಬೈಕ್ ಚಲಾಯಿಸುತ್ತಿದ್ದ ಭದ್ರಾವತಿ ನಿವಾಸಿಯೊಬ್ಬರಿಗೆ ಒಟ್ಟು ₹11 ಸಾವಿರ ದಂಡ ವಿಧಿಸಲಾಗಿದೆ.
READ | ತಲೆ ಮಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
ಕಾಡು ನಿವಾಸಿ ಕುಮಾರ್(49) ಎಂಬಾತನಿಗೆ ದಂಡ ವಿಧಿಸಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ನಡೆದಿದ್ದೇನು?
ಡಿಸೆಂಬರ್ 4ರಂದು ನ್ಯೂ ಟೌನ್ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಅವರು ಭದ್ರಾವತಿ ನಗರದ ಜಯಶ್ರೀ ಸರ್ಕಲ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ, ದ್ವಿ ಚಕ್ರ ವಾಹನ ಸವಾರನೊಬ್ಬನು ಹೆಲ್ಮೆಟ್ ಧರಿಸದೇ ಮತ್ತು ಪಾನಮತ್ತನಾಗಿ ವಾಹನ ಚಲಾಯಿಸಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಚಾಲಕನಾದ ಕುಮಾರ್ ವಿರುದ್ಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿತ್ತು.