Shimoga rain | ಜುಲೈ ತಿಂಗಳಲ್ಲಿ‌ ವಾಡಿಕೆಗಿಂತ ಅಧಿಕ‌ ಮಳೆ‌ ದಾಖಲು, ಯಾವ ಜಲಾಶಯಗಳಲ್ಲಿ‌ ಎಷ್ಟಿದೆ ನೀರು?

Heavy rain brings 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 43.10 ಮಿಮಿ ಮಳೆಯಾಗಿದ್ದು, ಸರಾಸರಿ 6.16 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 724.84 ಮಿಮಿ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ
ಶಿವಮೊಗ್ಗ 1.80 ಮಿಮಿ., ಭದ್ರಾವತಿ 2.60 ಮಿಮಿ., ತೀರ್ಥಹಳ್ಳಿ 8.60 ಮಿಮಿ., ಸಾಗರ 12.60 ಮಿಮಿ., ಶಿಕಾರಿಪುರ 3.50 ಮಿಮಿ., ಸೊರಬ 4.10 ಮಿಮಿ. ಹಾಗೂ ಹೊಸನಗರ 9.90 ಮಿಮಿ. ಮಳೆಯಾಗಿದೆ.

READ |  ಕೊಡಚಾದ್ರಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ, ಕಾರಣವೇನು?

ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1787.50 (ಇಂದಿನ ಮಟ್ಟ), 12883.00 (ಒಳಹರಿವು), 3146.20 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.60.
ಭದ್ರಾ: 186 ಅಡಿ (ಗರಿಷ್ಠ), 162.20 (ಇಂದಿನ ಮಟ್ಟ), 7550.00 (ಒಳಹರಿವು), 189.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.20.
ತುಂಗಾ: 588.24 ಅಡಿ (ಗರಿಷ್ಠ), 588.24 (ಇಂದಿನ ಮಟ್ಟ), 11420.00 (ಒಳಹರಿವು), 11420.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀಟರ್ (ಎಂಎಸ್‍ಎಲ್‍ಗಳಲ್ಲಿ), 580.46 (ಇಂದಿನ ಮಟ್ಟ), 1921 (ಒಳಹರಿವು), 0.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 584.36.
ಪಿಕ್‍ಅಪ್: 563.88 ಮೀ. 561.68 (ಇಂದಿನ ಮಟ್ಟ), 612 (ಒಳಹರಿವು), 1167.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.58.
ಚಕ್ರ: 580.57‌ ಮೀಟರ್, 573.30 (ಇಂದಿನ ಮಟ್ಟ), 584.00 (ಒಳಹರಿವು), 1738.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 573.42 ಮೀ.
ಸಾವೆಹಕ್ಲು: 583.70 ಮೀ. (ಗರಿಷ್ಠ), 579.00 (ಇಂದಿನ ಮಟ್ಟ), 906.00 (ಒಳಹರಿವು), 1584.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 574.08.

Today arecanut rate | 24/07/2023 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

error: Content is protected !!