Bike racing | ಬೈಕ್ ರೇಸಿಂಗ್ ಮಾಡಿದ ಇಬ್ಬರಿಗೆ ನ್ಯಾಯಾಲಯ ದಂಡ

Breaking news1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತೀರ್ಥಹಳ್ಳಿಯ (Thirthahalli) ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ಹತ್ತಿರ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ‌ ಇಬ್ಬರಿಗೆ ತಲಾ ₹5,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ತೀರ್ಥಹಳ್ಳಿಯ ಸೀಬಿನಕೆರೆಯ ಸೌರವ್(21), ತೀರ್ಥಹಳ್ಳಿಯ ಶಂಕರ್(21) ಎಂಬುವವರಿಗೆ ದಂಡ ವಿಧಿಸಲಾಗಿದೆ.

READ | ಮಳೆ ಕುಸಿದರೂ ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ಏರಿಕೆ

ನಡೆದಿದ್ದೇನು?
ಆಗಸ್ಟ್‌ 1 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ನ ಹತ್ತಿರ ಪ್ರತ್ಯೇಕವಾದ 2 ಯಮಹಾ ಬೈಕ್ ಸವಾರರು ಬೈಕ್ ಗಳನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರೇಸಿಂಗ್ ಮಾಡುತ್ತಿದ್ದರು. ಬೈಕ್ ಗಳ ಹಿಂಬದಿಯ ಸವಾರರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ರೇಸಿಂಗ್ ಮಾಡುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡುತ್ತಿರುತ್ತಾರೆ. ಇದನ್ನು ಗಮನಿಸಿದ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ ಅವರು ಎರಡೂ ಬೈಕ್ ಗಳ ಸವಾರರನ್ನು ತಡೆದು ನಿಲ್ಲಿಸಿ, ಬೈಕ್ ಸವಾರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ತೀರ್ಥಹಳ್ಳಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Homestay | ಶಿವಮೊಗ್ಗದ ಹೋಮ್ ಸ್ಡೇಗಳಿಗೆ ಮಹತ್ವದ ಸೂಚನೆ, ತಪ್ಪಿದ್ದಲ್ಲಿ ನೋಂದಣಿಯೇ ರದ್ದು

error: Content is protected !!