Job in shimoga | ಎಪಿಪಿ, ವಕೀಲರ ಹುದ್ದೆ, ಗ್ರಾಮೀಣ ಅಂಚೆ ಸೇವಕರ ನೇಮಕ, ಕೂಡಲೇ ಅರ್ಜಿ‌ ಸಲ್ಲಿಸಿ

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ 12 ಸಹಾಯಕ ಸರ್ಕಾರಿ ಅಭಿಯೋಜಕರು/ ವಕೀಲರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

READ |  ಜಿಟಿಟಿಸಿಯಲ್ಲಿ ಡಿಪ್ಲೊಮಾ ತರಬೇತಿಗಾಗಿ ಅರ್ಜಿ, ಲೋಕಾಯುಕ್ತ ಕುಂದು-ಕೊರತೆ ಸಭೆ, ಇ-ಸಂಗ್ರಹಣಾ ಪೋರ್ಟಲ್‍ನಲ್ಲಿ ನೋಂದಣಿ

ಆಸಕ್ತರು ಅರ್ಜಿಯನ್ನು ಆ.20ರೊಳಗಾಗಿ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ.ಎಂ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಅಭಿಯೋಜಕರ ಕಚೇರಿ, 4ನೇ ಮಹಡಿ, ಹೆಚ್ಚುವರಿ ನ್ಯಾಯಾಲಯಗಳ ಸಂಕೀರ್ಣ, ಬಾಲರಾಜ ಅರಸ್ ರಸ್ತೆ, ಶಿವಮೊಗ್ಗದ ಸೂಚನಾ ಫಲಕದಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಪಡೆಯಬಹುದಾಗಿದೆ.

ಗ್ರಾಮೀಣ ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

SHIMOGA: ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ 10ನೇ ತರಗತಿ ಪಾಸಾಗಿರುವ 18-40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅಂಚೆ ವೆಬ್‍ಸೈಟ್ www.indiapostgdsonline.gov.in ರಲ್ಲಿ ದಿ: 23/08/2023ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಯಾ ವಿಭಾಗದ ಅಂಚೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222516ನ್ನು ಸಂಪರ್ಕಿಸುವುದು.

error: Content is protected !!