ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆ.4 ರಂದು ಜಿಲ್ಲೆಯ ಆನಂದಪುರಂ- ಕುಂಸಿ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಲಾಗಿದೆ.
ಮೃತ ವ್ಯಕ್ತಿ ಸುಮಾರು 5.5 ಅಡಿ ಎತ್ತರ, ಸಾದಾ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಬಣ್ಣದ 4 ಇಂಚು ಕೂದಲು, 1 ಇಂಚು ಉದ್ದದ ಕಪ್ಪು ಗಡ್ಡ-ಮೀಸೆ ಬಿಟ್ಟಿದ್ದು, ಮೈಮೇಲೆ ನೀಲಿ ಬಣ್ಣದ ಅರ್ಧತೋಳಿನ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಬರ್ಮುಡ ಧರಿಸಿರುತ್ತಾನೆ. ಎಡಗೈಯಲ್ಲಿ ಹದ್ದಿನ ಚಿತ್ರವಿರುವ ಹಚ್ಚೆ ಹಾಕಿಸಿರುತ್ತಾನೆ. ಬಲಗೈಯಲ್ಲಿ ರಾಣಿ ಎಂಬ ಹಚ್ಚೆ ಹಾಗೂ ತೋಳಿನಲ್ಲಿ ಚಕ್ರಾಕಾರದ ಹಚ್ಚೆ ಹಾಕಿಸಿರುತ್ತಾನೆ. ಬಲಗಾಲಿಗೆ ಕಪ್ಪು ದಾರ ಕಟ್ಟಿರುತ್ತಾನೆ.
READ | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ದೂ. ಸಂ.: 08182-222974/9480802124 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಅಪರಿಚಿತ ವ್ಯಕ್ತಿ ಸಾವು
SHIMOGA: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಸುಮಾರು 70 ರಿಂದ 75 ವಯಸ್ಸಿನ ಮೈಲಾರಿ ಎಂಬ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಜು.30 ರಂದು ಮೃತಪಟ್ಟಿರುತ್ತಾನೆ.
ಮೃತ ವ್ಯಕ್ತಿಯ ವಿಳಾಸ ತಿಳಿದಿರುವುದಿಲ್ಲ. ಮೃತನು ಸುಮಾರು 5 ಅಡಿ 5 ಇಂಚು ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ತಲೆಯಲ್ಲಿ 2 ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲು, 01 ಇಂಚು ಉದ್ದ ಗಡ್ಡ ಮೀಸೆ ಇರುತ್ತದೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡೊಪೇಟೆ ಪೊಲೀಸ್ ಠಾಣೆ ಸಂಖ್ಯೆ: 08182-261414 ಅಥವಾ 9611761255 ನ್ನು ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.