Court News | 20 ವರ್ಷ ಕಠಿಣ ಕಾರಾವಾಸ ಶಿಕ್ಷೆ, ₹1.50 ದಂಡ, ಮನೆ‌ ಹೊಕ್ಕಿ‌ ಹಲ್ಲೆ ಮಾಡಿದವನಿಗೆ 3 ವರ್ಷ ಜೈಲ

Judgement

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಪ್ರಾಪ್ತಳಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬ‌ನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹1,50 ಲಕ್ಷ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 9 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2022ನೇ ಸಾಲಿನಲ್ಲಿ ಶಿವಮೊಗ್ಗದ 27 ವರ್ಷದ ವ್ಯಕ್ತಿಯೊಬ್ಬನು 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆಂದು ನೊಂದ ಬಾಲಕಿಯ ತಂದೆಯು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ತನಿಖಾಧಿಕಾರಿಯಾದ ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್.ಪಿ ಬಿ.ಬಾಲರಾಜ್ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

READ | ಸೊರಬದಲ್ಲಿ 140 ಜನರ ವಿರುದ್ಧ ಕೇಸ್, ಸಚಿವ ಮಧು ಬಂಗಾರಪ್ಪ ನೀಡಿದ ಸೂಚನೆಗಳೇನು?

ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ (The Addl District and Sessions Court) ಫಾಸ್ಟ್ ಟ್ರ್ಯಾಕ್ ಸೆಷನ್ ಕೋರ್ಟ್ (FTSC–II) (POCSO)ವು ಆದೇಶಿಸಿದೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

3 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ, ₹10,000 ದಂಡ

BHADRAVATHI : 60 ವರ್ಷದ ಮಹಿಳೆಯ ಮನೆಗೆ ಹೊಕ್ಕಿ ಹಲ್ಲೆ ಮಾಡಿದನ ವಿರುದ್ಧದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಮತ್ತು ₹10,000 ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ.
ಹಳೇ ಸಂಕ್ಲೀಪುರದ ಕುಮಾರ(42) ಈತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಧೀಶ ಮಹಮ್ಮದ್ ಅಲಿ ನಾಯಕ್ ತೀರ್ಪು ನೀಡಿದರು.

READ | ವಾಟ್ಸಾಪ್, ಫೇಸ್ಬುಕ್ ಗ್ರೂಪ್ ಅಡ್ಮಿನ್’ಗಳೇ ಎಚ್ಚರ! ಶಿವಮೊಗ್ಗ ಪೊಲೀಸರು ಹೇಳಿದ್ದೇನು?

ಪ್ರಕರಣದ ಹಿನ್ನೆಲೆ
ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಪುರ ನಿವಾಸಿ ಮಾಡಲಾಗದ 60 ವರ್ಷದ ಮಹಿಳೆಯೊಬ್ಬರು 2015 ಜನವರಿ‌ 13ರಂದು‌ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕುಮಾರ ಎಂಬ ವ್ಯಕ್ತಿಯು ಸದರಿ ಮಹಿಳೆಯ ಮನೆಗೆ ಬಂದು ಕುಡಿಯಲು ನೀರು ಕೇಳಿ, ಮಹಿಳೆಯು ನೀರು ತರಲು ಅಡುಗೆ ಮನೆಗೆ ಹೋದಾಗ ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು, ಕೆಳಗೆ ಬೀಳಿಸಿ ತಲೆದಿಂಬಿನಿಂದ ಮುಖಕ್ಕೆ ಒತ್ತಿ, ಕೈಯಿಂದ ಹೊಡೆದು, ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿರುತ್ತಾನೆಂದು ದೂರು‌ ನೀಡಿದ್ದರು‌.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ಪೋಲೀಸ್ ವೃತ್ತ ನಿರೀಕ್ಷಕ ಪ್ರಭು ಸೂರಿನ್ ಸಂಪೂರ್ಣ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಸಹಾಯಕ ಸರ್ಕಾರಿ ನೀಲಜ್ಯೋತಿ ವಾದ ಮಂಡಿಸಿದ್ದರು.

KSOU | ದುಡಿಯುತ್ತಲೇ‌‌ ಡಿಗ್ರಿ ಸಂಪಾದಿಸಬೇಕೇ? ಹಾಗಾದರೆ ಕೂಡಲೇ ಅರ್ಜಿ‌ ಸಲ್ಲಿಸಿ, ಯಾರಿಗೆಲ್ಲ‌ ಶುಲ್ಕ‌ ವಿನಾಯಿತಿ?

error: Content is protected !!