Parade | ಸ್ವಾತಂತ್ರ್ಯ ದಿನಾಚರಣೆ ಪರೇಡ್ ನಲ್ಲಿ ಇದೇ‌ ಮೊದಲು ಕನ್ನಡದಲ್ಲಿ ಆದೇಶ, ಪಥ ಸಂಚಲನದಲ್ಲಿ ಯಾರಿಗೆ ಯಾವ ಸ್ಥಾನ?, ರಂಗೋಲಿ ತುಳಿದ ಚಿತ್ರ ವೈರಲ್

Bindu rani ips

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪರೇಡ್ ನಲ್ಲಿ ಐಪಿಎಸ್ ಅಧಿಕಾರಿ ಎನ್.ಆರ್.ಬಿಂದು ಮಣಿ (Bindu Mani) ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ.
ಪಥ ಸಂಚಲನದ ನೇತೃತ್ವ ವಹಿಸಿದ್ದ ಬಿಂದು ಮಣಿ ಅವರು ಇದೇ ಮೊದಲು ಕನ್ನಡದಲ್ಲಿ‌ ಆದೇಶ ನೀಡಿದರು.

READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಿದ ತ್ರಿವರ್ಣ ಧ್ವಜ, ಸೂಪರ್ ಮಹಿಳೆ ಕಾರ್ಯಕ್ರಮಕ್ಕೆ ಚಾಲನೆ, ಜಿಲ್ಲೆಯಲ್ಲಿ ಏನೇನು ವಿಶೇಷ?

ಹಿಂದಿಯಲ್ಲಿರುತ್ತೆ ಆದೇಶಗಳು
ಪಥ ಸಂಚಲನದ ನೇತೃತ್ವ ವಹಿಸುವ ಕಮಾಂಡರ್ ಗಳು ಹಿಂದಿ ಭಾಷೆಯಲ್ಲಿ ಆದೇಶ ನೀಡುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ. ಆದರೆ, ಬಿಂದು ಮಣಿ ಕನ್ನಡದಲ್ಲಿ ಆದೇಶಿಸಿದ್ದು ಜನರ ಗಮನ ಸೆಳೆಯಿತು. ಸಭಿಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಏನೆಲ್ಲ‌ ಕನ್ನಡದಲ್ಲಿ ನಿರ್ವಹಣೆ?
ತುಕಡಿಗಳ ಪರಿಶೀಲನೆ, ಪಥ ಸಂಚಲನಕ್ಕೆ ಅನುಮತಿ, ತುಕಡಿಗಳ ನಿರ್ಗಮನದ ಆದೇಶ ಮತ್ತು ಅನುಮತಿಗಳನ್ನು ಕನ್ನಡದಲ್ಲಿಯೇ ನಿರ್ವಹಿಸಿದರು.
ಪಥ ಸಂಚಲನದಲ್ಲಿ ಯಾರಿಗೆ ಯಾವ ಸ್ಥಾನ?
ಪಥಸಂಚಲನದ 3ನೇ ಸ್ಥಾನ ಪ್ರಿಯದರ್ಶಿನಿ ಶಾಲೆ, ದ್ವಿತೀಯ ಸ್ಥಾನ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಾಜನೂರು ಹಾಗೂ ಪ್ರಥಮ ಸ್ಥಾನ ಸರ್ಕಾರಿ ಬಾಲ ಮಂದಿರದ ಮಕ್ಕಳು ಪಡೆದರು. ಸಚಿವರು ಹಾಗೂ ಗಣ್ಯರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಲಾದ ಗ್ಯಾರಂಟಿ ಯೋಜನೆಯ ಪುಸ್ತಕ ಬಿಡುಗಡೆಗೊಳಿಸಿದರು.

READ | ಶಿವಮೊಗ್ಗದಲ್ಲಿನ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಿಮಗೆಷ್ಟು‌ ಗೊತ್ತು? ಶಿವಮೊಗ್ಗದ ಪ್ರಥಮ ಸ್ವಾತಂತ್ರ್ಯ ಸೇನಾನಿ ಯಾರು? ಎಷ್ಟು ಜನ ಗಲ್ಲಿಗೇರಿದ್ದರು?

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನಡೆ ವೈರಲ್

HS Sundresh
ತ್ರಿವರ್ಣ ರಂಗೋಲಿಯ ಮೇಲೆ ಕಾಲಿಟ್ಟಿರುವುದು.

SHIMOGA: ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಧ್ವಜಾರೋಹಣ ನಡೆಯುವ ಜಾಗದಲ್ಲಿ ನೆಲದ ಮೇಲೆ ತ್ರಿವರ್ಣ ಧ್ವವದ ರಂಗೋಲಿ ಬಿಡಿಸಲಾಗಿದೆ. ಅದರ ಮೇಲೆಯೇ ನಿಂತಿದ್ದಾರೆ ಎನ್ನುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

error: Content is protected !!