Bang movie | ಶಾನ್ವಿ ಶ್ರೀವಾತ್ಸವ್ ನಟನೆಯ ‘ಬ್ಯಾಂಗ್’ ಸಿನಿಮಾ ಆ.18ರಂದು ರಿಲೀಸ್, ಎಲ್ಲೆಲ್ಲಿ ಶೂಟಿಂಗ್?

sanvi srivatsav

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬ್ಯಾಂಗ್ ಸಿನಿಮಾ (Bang cinema) ಆ.18ರಂದು ಬಿಡುಗಡೆ ಆಗಲಿದ್ದು, ಎಲ್ಲರೂ ವೀಕ್ಷಿಸುವಂತೆ ನಿರ್ದೇಶಕ ಗಣೇಶ್ ಪರಶುರಾಮ್ (Ganesh Parashuram) ತಿಳಿಸಿದರು.

READ |  ಶಿವಮೊಗ್ಗದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆದವರೆಷ್ಟು ಜನ? ಕೋಟಿ ದಾಟಿದ ಸಬ್ಸಿಡಿ ಹಣ!

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಟಿ ಶಾನ್ವಿ ಶ್ರೀವಾತ್ಸವ್ ಮೊದಲಾದವರು ಅಭಿನಯಿಸಿರುವ ಬ್ಯಾಂಗ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಸೃಷ್ಟಿಸಿದೆ. ವಿಭಿನ್ನ ಕಥಾಹಂದರ ಹೊಂದಿರುವ ಬ್ಯಾಂಗ್ ಚಿತ್ರ 48 ಗಂಟೆಗಳಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ ಎಂದರು.

bang movie sanavi
ಶಿವಮೊಗ್ಗದ ಮಥುರಾ ಪ್ಯಾರಡೈಸ್ ನಲ್ಲಿ ನಡೆದ ಮಾಧ್ಯಮಗೋಷ್ಠಿ.

ಎಲ್ಲೆಲ್ಲಿ ಶೂಟಿಂಗ್?
ಬೆಂಗಳೂರು, ಮಂಗಳೂರು, ಉಡುಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಿಗ್ ಬಜೆಟ್ ಮತ್ತು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡುತ್ತಿರುವುದು ಸವಾಲಾಗಿದೆ. ಒಂದು ವಾರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದರೂ ಚಿತ್ರ ಯಶಸ್ವಿಯಾಗುವ ಆಶಾವಾದ ಇದೆ ಎಂದು ಹೇಳಿದರು.
ತಿಳಿಹಾಸ್ಯದ ಚಿತ್ರ
ಚಿತ್ರದಲ್ಲಿ ಯಾವುದೇ ಸಂದೇಶ ಹೇಳಲು ಹೊರಟಿಲ್ಲ. ಸೂಕ್ಷ್ಮ ವಿಚಾರಗಳೂ ಇಲ್ಲ. ಗೊಂದಲಗಳಿಲ್ಲ, ಸಂಪೂರ್ಣ ಮನೋರಂಜನೆಯ ಉದ್ದೇಶದಿಂದ ಕುತೂಹಲಕಾರಿ ಕಥೆಯನ್ನು ಚಿತ್ರಕಥೆ ಮಾಡಿದ್ದೇವೆ. ನಿರೂಪಣೆ ಭಿನ್ನವಾಗಿದೆ. ತಿಳಿಹಾಸ್ಯದೊಂದಿಗೆ ಚಿತ್ರ ಸಾಗುತ್ತದೆ. ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಜನಮನ ಸೂರೆಗೊಂಡಿವೆ.
ಚಿತ್ರದ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ನಟ ಗುಜ್ಜರ್ ಶಿವಮೊಗ್ಗದವರೇ ಆಗಿದ್ದು ಇಲ್ಲಿನ ಪ್ರೇಕ್ಷಕರು ಸದಭಿರುಚಿಯ ಕನ್ನಡ ಸಿನಿಮಾಗಳಿಗೆ ಯಾವಾಗಲೂ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ಸಂಗೀತ ನಿರ್ದೇಶಕ ಋತ್ವಿಕ್ ಮುರುಳೀಧರ್, ನಟಿ ಶಾನ್ವಿ ಶ್ರೀವಾತ್ಸವ್, ನಟಿ ಶ್ರಾವ್ಯಾ ರಾವ್, ನಟ ನಾಟ್ಯರಂಗ, ಯುವನಟ ಗುಜ್ಜರ್ ಉಪಸ್ಥಿತರಿದ್ದರು.

ನಟಿ ಜಯಂತಿಗೆ ಶಿವಮೊಗ್ಗದ ರೊಟ್ಟಿ ಎಣಗಾಯಿ ಪಲ್ಲ್ಯೆ ಅಂದ್ರೆ ಪಂಚ ಪ್ರಾಣ, ಶಿವಮೊಗ್ಗದೊಂದಿಗೆ ಅಭಿನಯ ಶಾರದೆಯ ನಂಟು

error: Content is protected !!