Gandhi Grama Puraskar | ಶಿವಮೊಗ್ಗದ 7 ಗ್ರಾಮ‌ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ, ಪಟ್ಟಿಯಲ್ಲಿ ನಿಮ್ಮ ಪಂಚಾಯಿತಿ ಹೆಸರಿದೆಯೇ?

Shivamogga zilla panchayat

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು ‘ಗಾಂಧಿ ಗ್ರಾಮ ಪುರಸ್ಕಾರ (Gandhi grama puraskar)ಕ್ಕೆ ಭಾಜನವಾಗಿವೆ.

READ | 30 ಅಡಿ ಎತ್ತರದ ‘ಉಗ್ರ ನರಸಿಂಹ’ ವೀಕ್ಷಿಸಲು‌ ಜನವೋ ಜನ, ಶಿವಮೊಗ್ಗ ನಗರ ಕೇಸರಿಮಯ, ಈ‌‌ ಸಲದ‌ ಘೋಷಣೆ ಏನು?

ಯಾವೆಲ್ಲ ಪಂಚಾಯಿತಿಗಳು ಆಯ್ಕೆ?
ಶಿವಮೊಗ್ಗ ತಾಲೂಕಿನ ಹರಮಘಟ್ಟ, ಭದ್ರಾವತಿ ತಾಲೂಕಿನ ದಾಸರಕಲ್ಲಹಳ್ಳಿ, ತೀರ್ಥಹಳ್ಳಿ ತಾಲೂಕಿನ ಶಿಂಗನಬಿದರೆ, ಹೊಸನಗರ ತಾಲೂಕಿನ ರಿಪ್ಪನಪೇಟೆ, ಸಾಗರ ತಾಲೂಕಿನ ಹೊಸೂರು, ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಹಾಗೂ ಸೊರಬ ತಾಲೂಕಿನ ಶಕುನವಳ್ಳಿ ಪಂಚಾಯಿತಿಗಳು ಆಯ್ಕೆಯಾಗಿವೆ.
ರಾಜ್ಯದಲ್ಲಿ 237 ಗ್ರಾಪಂಗಳಿಗೆ ಪುರಸ್ಕಾರ
ಪಂಚಾಯತ್ ರಾಜ್ ಇಲಾಖೆ 2022-23ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ರಾಜ್ಯದಲ್ಲಿ 237 ಹಾಗೂ ‘ವಿಶೇಷ ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ನಾಲ್ಕು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.
ಅ.2ರಂದು ಪ್ರಶಸ್ತಿ ಪ್ರದಾನ
ಪುರಸ್ಕಾರಕ್ಕೆ ಆಯ್ಕೆಯಾದ ಎಲ್ಲ 237 ಪಂಚಾಯತಿಗಳಿಗೂ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕಾರ್ಯಕ್ರಮದಲ್ಲಿ ಅ.2ರಂದು ನಡೆಯುವ ಕಾರ್ಯಕ್ರಮದಲ್ಲಿ ತಲಾ ₹5 ಲಕ್ಷ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಆಯ್ಕೆಯಾದ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದು, ಪ್ರಶಸ್ತಿ ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ.

error: Content is protected !!