Accident | ಭೀಕರ ಅಪಘಾತದಲ್ಲಿ‌ ಲಾರಿ ಚಕ್ರಕ್ಕೆ ಸಿಲುಕಿ ಮೂವರ ದುರ್ಮರಣ

Accident

 

 

ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNUR: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಾಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

READ | ಶಿವಮೊಗ್ಗದಲ್ಲಿ ಕುತೂಹಲ ಸೃಷ್ಟಿಸಿದ ನಾಯಿಯ ಕೊರಳಲ್ಲಿನ ಟ್ಯಾಗ್! ಟ್ಯಾಗ್’ನಲ್ಲಿ ಏನಿದೆ?

ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್‌– ಅರಹತೊಳಲು ಸಮೀಪ ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ. ಲಾರಿ ಅಡಿ ಸಿಲುಕಿರುವ ದೇಹಗಳು ಗುರುತು ಸಿಗದಷ್ಟು ಛಿದ್ರಗೊಂಡಿವೆ. ಮೃತರ ಗುರುತು ಪತ್ತೆಯಾಗಿಲ್ಲ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೊಂದು ಬೈಕಿನಲ್ಲಿದ್ದ ಭದ್ರಾವತಿ ತಾಲೂಕು ಅರದೊಟ್ಲು ಗ್ರಾಮದ ಗಗನ್‌ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

error: Content is protected !!