Shimoga Peaceful | ಶಿವಮೊಗ್ಗದಲ್ಲಿ ಕೊತ-ಕೊತವೂ ಇಲ್ಲ, ಧಗ-ಧಗವೂ ಇಲ್ಲ! ಎಸ್.ಪಿ‌ ಮೆಸೆಜ್ ಭಾರೀ ವೈರಲ್

Ameer ahmed circle

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಕೊತ-ಕೊತವೂ ಇಲ್ಲ.. ಧಗ-ಧಗವೂ ಇಲ್ಲ. ಹೀಗೆಂದು ಖುದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಈ ಸಂದೇಶ. ಸಾಮಾಜಿಕ ಜಾಲತಾಣ(social media)ದಲ್ಲಿ ಭಾರೀ ವೈರಲ್ ಆಗಿದೆ.

one click many news logo

GK Mithun kumar

READ | ರಾಗಿಗುಡ್ಡದಲ್ಲಿ ಈಗ ಹೇಗಿದೆ ಸ್ಥಿತಿ? ಇಲ್ಲಿದೆ ಗ್ರೌಂಡ್‌ ರಿಪೋರ್ಟ್

ರಾಗಿಗುಡ್ಡ(Ragigudda)ದಲ್ಲಿ ಈದ್ ಮಿಲಾದ್ ಮೆರವಣಿಗೆ (eid milad procession) ನಂತರ ನಡೆದ ಕಲ್ಲು ತೂರಾಟ ಪ್ರಕರಣ ಹಲವು‌‌ ಬೆಳವಣಿಗೆಗಳಿಗೆ ಕಾರಣವಾಗಿತ್ತು.‌ ಶಾಂತಿ ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ನಗರಕ್ಕೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.‌ ಈ ನಡುವೆ ಕೆಲ ಮಾಧ್ಯಮಗಳಲ್ಲಿ ಅತಿರೇಕದ‌ ಸುದ್ದಿ ಬಿತ್ತರಗೊಂಡಿದೆ ಎಂದೂ ಕೆಲವರು ಆರೋಪಿಸಿದ್ದರು. ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ (shimoga SP GK Mithun Kumar) ಪೊಲೀಸ್‌‌ ಇಲಾಖೆಯ ಅಧಿಕೃತ ಗ್ರೂಪಿನಲ್ಲಿ ಈ ಸಂದೇಶ ಕಳುಹಿಸಿದ್ದರು. ಇದು ವೈರಲ್ ಆಗಿದೆ. ಅಶಾಂತಿ ಮೂಡಿದ್ದು, ಶಿವಮೊಗ್ಗದ ರಾಗಿಗುಡ್ಡ ಭಾಗದಲ್ಲಿ ಮಾತ್ರ. ಆದರೆ, ಇಡೀ ಶಿವಮೊಗ್ಗ‌ ಶಾಂತವಾಗಿದೆ ಎಂಬ ವಿಚಾರದ ಬಗ್ಗೆಯೂ ಜನರು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚಿಸುತ್ತಿದ್ದಾರೆ.
ಭಯ ಬೇಡ, ಶಿವಮೊಗ್ಗ ಪ್ರಶಾಂತವಾಗಿದೆ
ಶಿವಮೊಗ್ಗ ಜಿಲ್ಲೆ ಪ್ರಶಾಂತವಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಎಲ್ಲಿಯೂ ತೊಂದರೆಯಾಗಿಲ್ಲ. ರಾಗಿಗುಡ್ಡದಲ್ಲೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಾನುವಾರ ರಾತ್ರಿಯ ನಂತರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ. ಇದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

error: Content is protected !!