ಜನವರಿ 10ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಶ್ವಾನ, ಬೆಕ್ಕು ಪ್ರದರ್ಶನ, ಕಂಪ್ಲೀಟ್ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ವಿವಿಧ ತಳಿಯ ಶ್ವಾನ ಮತ್ತು ಬೆಕ್ಕು ಪ್ರದರ್ಶನ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ.

WhatsApp Image 2021 01 06 at 8.59.35 AM 1ಇದನ್ನೂ ಓದಿ | ಹಾಡು ಹಕ್ಕಿಗೆ ಬಿರುದು ಸನ್ಮಾನ

ನಗರದ ಎನ್.ಇ.ಎಸ್. ಕಾಲೇಜು ಮೈದಾನದಲ್ಲಿ ಬೆಳಗ್ಗೆ 9.30ರಿಂದ ಪ್ರದರ್ಶನ ಆರಂಭವಾಗಲಿದೆ. ಭಾಗವಹಿಸಲು ಜನವರಿ 8 ಅಂತಿಮ ದಿನವಾಗಿದೆ. ಶ್ವಾನಗಳಿಗೆ 300 ರೂಪಾಯಿ ಮತ್ತು ಬೆಕ್ಕಿಗಳಿಗೆ 200 ರೂ. ಪ್ರವೇಶ ಶುಲ್ಕು ನಿಗದಿಪಡಿಸಲಾಗಿದೆ. 500 ರೂ. ಸ್ಪಾಟ್ ಎಂಟ್ರಿ ಶುಲ್ಕವಿದೆ.
ಕೊಲ್ಕತ್ತಾದ ಪ್ರಸಂಜೀತ್ ಚಟರ್ಜಿ ಅವರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಒಟ್ಟು 75 ಸಾವಿರ ರೂಪಾಯಿ ನಗದು ಬಹುಮಾನವಿರಲಿದ್ದು, ವಿಶೇಷ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಕೂಡ ನೀಡಲಾಗುವುದು.

ಶ್ವಾನ ವರ್ಗದ ಬಹುಮಾನ
ಪ್ರಥಮ ಸ್ಥಾನಕ್ಕೆ 20000 ರೂ., ದ್ವಿತೀಯಕ್ಕೆ 15000 ರೂ. ಮತ್ತು ತೃತೀಯ ಸ್ಥಾನಕ್ಕೆ 10000 ರೂ. ಬಹುಮಾನ ನಿಗದಿಪಡಿಸಲಾಗಿದೆ.
ಬೆಕ್ಕು ವರ್ಗದ ಬಹುಮಾನ
ಪ್ರಥಮ ಸ್ಥಾನಕ್ಕೆ 3000 ರೂ., ದ್ವಿತೀಯಕ್ಕೆ 2000 ರೂ., ತೃತೀಯಕ್ಕೆ 1000 ರೂ.
ಇತರೆ ವಿಭಾಗದ ಬಹುಮಾನ
ಬೆಸ್ಟ್ ಪಪ್ಪಿ ಅವಾರ್ಟ್ 3000 ರೂ, ರಿಸರ್ವಡ್ ಬೆಸ್ಟ್ ಪಪ್ಪಿ 2000 ರೂ., ಬೆಸ್ಟ್ ಇಂಡಿಯನ್ ಬ್ರೀಡ್ 2000 ರೂ., ರಿ.ಬೆಸ್ಟ್ ಇಂಡಿಯನ್ ಬ್ರೀಡ್ 1000 ರೂ., ಬೆಸ್ಟ್ ಹ್ಯಾಂಡಲ್ಲರ್ 1000 ರೂ., ಬೆಸ್ಟ್ ಜ್ಯೂನಿಯರ್ ಹ್ಯಾಂಡಲ್ಲರ್ 1000 ರೂ. ಬಹುಮಾನ.

ಇದನ್ನೂ ಓದಿ | 19 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ, ಶುರುವಾಯ್ತು ನಂಬರ್ ಹಾಕುವ ಕಾರ್ಯ

ಸೆಲ್ಫಿ ಅವಾರ್ಡ್ | ನೆಚ್ಚಿನ ನಾಯಿ ಮತ್ತು ಬೆಕ್ಕಿನೊಂದಿಗೆ ಸೆಲ್ಫಿ ಕಳುಹಿಸುವ ಮೂಲಕವೂ ಬಹುಮಾನ ಗೆಲ್ಲಬಹುದು. ಅದಕ್ಕಾಗಿ ವಾಟ್ಸ್ ಆಪ್ ಸಂಖ್ಯೆ 8217432494ಗೆ ಚಿತ್ರಗಳನ್ನು ಕಳುಹಿಸತಕ್ಕದ್ದು.
ಮಾಹಿತಿಗಾಗಿ ಇವರಿಗೆ ಸಂಪರ್ಕಿಸಿ | ಅಭಿಷೇಕ್ ಗೌಡ 7676441122, ಜಿ.ಎಸ್.ಪ್ರಸಾದ್ 9964289695, ಟಿಸಚಿನ್ 7892685676ಮ ಎಸ್.ಎಸ್.ಅಭಿನಂದನ್ 7406571007, ವಿ.ಎನ್.ಅನೂಪ್ 9482700620, ಮನೋಹರ್ 9731802401.
ಸೂಚನೆ | ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು.

error: Content is protected !!