Route change | ಚಿತ್ರದುರ್ಗ- ಶಿವಮೊಗ್ಗ ಮಾರ್ಗ ಬದಲಾವಣೆ, ಪರ್ಯಾಯ ಮಾರ್ಗ ಅಧಿಸೂಚನೆ

Sahyadri collegee road

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಷ್ಟ್ರೀಯ ಹೆದ್ದಾರಿ-13 ಚಿತ್ರದುರ್ಗ- ಶಿವಮೊಗ್ಗ ನಡುವಿನ 525.00 ಕಿ.ಮೀ ನಲ್ಲಿ ಎಲ್‍ಸಿ-46 ರಲ್ಲಿ ಟೂ ಲೇನ್ ಸ್ಟೀಲ್ ಕಾಂಪೋಸಿಟ್ ಆರ್‍ಓಬಿ ನಿರ್ಮಾಣ ಮಾಡಲಿರುವುದರಿಂದ ಅ.1ರಿಂದ ನವೆಂಬರ್ 8ರ ವರೆಗೆ ವಾಹನಗಳು ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಅಧಿಸೂಚಿಸಿರುತ್ತಾರೆ.

READ | ರಾಗಿಗುಡ್ಡದಲ್ಲಿ ಮಾತ್ರ ನಿಷೇಧಾಜ್ಞೆ, ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?

ಪರ್ಯಾಯ ಮಾರ್ಗದ ವಿವರ

  • ಶಿವಮೊಗ್ಗದಿಂದ- ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಶಿವಮೊಗ್ಗದಿಂದ ಚಿತ್ರದುರ್ಗ ಕಡೆ ಹೋಗುವ ಬೈಕು, ಕಾರು ಹಾಗೂ ಎಲ್‍ಎಂವಿ ವಾಹನಗಳು ಶಾಂತಮ್ಮ ಲೇ ಔಟ್ ಮುಖಾಂತರ ಮತ್ತು ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ಮಾರ್ಗವಾಗಿ ಹೊಳಲೂರು, ತುಂಗಭದ್ರ ಹೊಸ ಸೇತುವೆ, ಸನ್ಯಾಸಿ ಕೋಡಮಗ್ಗಿ, ಹೊಳೆಹೊನ್ನೂರು ಮುಖಾಂತರ ಅಥವಾ ಎಂ.ಆರ್.ಎಸ್ ಸರ್ಕಲ್, ಹರಿಗೆ, ಮಾಚೇನಹಳ್ಳಿ, ಭದ್ರಾವತಿ ಮುಖೇನ ಚಲಿಸುವುದು.
  • ಚಿತ್ರದುರ್ಗದಿಂದ-ಶಿವಮೊಗ್ಗಕ್ಕೆ ಹೋಗವು ವಾಹನಗಳು ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್‍ನಲ್ಲಿ ಹಾದು ಹೋಗುವ ರಸ್ತೆಯುವ ಚಿಕ್ಕ ರಸ್ತೆಯಾಗಿದ್ದು ಸದರಿ ರಸ್ತೆಯಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್‍ಗಳು ತಿರುವು ಪಡೆದುಕೊಳ್ಳಲು ಮತ್ತು ಚಲಿಸಲು ಸಾಧ್ಯವಾಗುವುದಿಲ್ಲ. ಚಿಕ್ಕ ರಸ್ತೆಯಾಗಿರುವುದರಿಂದ ಪದೇ ಪದೆ ಟ್ರಾಫಿಕ್ ಉಂಟಾಗುವ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ಫ್ಲೈಓವರ್‍ ನ ಸರ್ವಿಸ್ ರಸ್ತೆಯಲ್ಲಿ ಚಲಿಸುವುದು.

error: Content is protected !!