Railway  line | ಶಿವಮೊಗ್ಗ-ಶಿಕಾರಿಪುರ ನೂತನ ರೈಲ್ವೆ ಮಾರ್ಗ, ಭರದಿಂದ ಸಾಗಿದೆ ಟ್ರ್ಯಾಕ್ ಕಾಮಗಾರಿ

Shikaripura shivamogga railway

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನಡುವೆ ಸಂಪರ್ಕ ಸೇತುವೆ ಆಗಲಿರುವ ಬಹುನಿರೀಕ್ಷಿತ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಕಾಮಗಾರಿಯು ಭರದಿಂದ ಸಾಗಿದೆ.

READ | ಚಿತ್ರದುರ್ಗ- ಶಿವಮೊಗ್ಗ ಮಾರ್ಗ ಬದಲಾವಣೆ, ಪರ್ಯಾಯ ಮಾರ್ಗ ಅಧಿಸೂಚನೆ

ಈಗಾಗಲೇ ಶಿವಮೊಗ್ಗ- ಶಿಕಾರಿಪುರ ನೂತನ ರೈಲ್ವೆ ಮಾರ್ಗ ಯೋಜನೆಯ ಭಾಘವಾಗಿ ಚಿನ್ನಿಕಟ್ಟೆ ಗ್ರಾಮದಲ್ಲಿ ಸಮತಟ್ಟು ಹಾಗೂ ರೋಲಿಂಗ್ ಚಟುವಟಿಕೆಗಳು ನಡೆದಿವೆ. ನಾರಾಯಣಪುರ ಗ್ರಾಮದಲ್ಲಿ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯ ವೆಚ್ಚವು 530.59 ಕೋಟಿ ರೂ. ಆಗಿದೆ. ಇನ್ನೊಂದು ವಿಶೇಷವೆಂದರೆ, ಇದು ಶಿವಮೊಗ್ಗದಿಂದ ಬೆಂಗಳೂರು- ಮುಂಬೈ ನಡುವೆಯೂ ನೇರ ಸಂಪರ್ಕವನ್ನು ಒದಗಿಸಲಿದೆ.
ಸಿಗಲಿವೆ 12 ರೈಲ್ವೆ ನಿಲ್ದಾಣಗಳು
ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು (ಹಾವೇರಿ) ರೈಲು ಮಾರ್ಗವು 90 ಕಿ.ಮೀ. ದೂರವಿದೆ. 1,431.29 ಎಕರೆ ಭೂ ಸ್ವಾಧೀನವಾಗಿದೆ. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ಸಿಗಲಿವೆ.

error: Content is protected !!