Navaratri Darshan | ಸಿಗಂದೂರು ಚೌಡೇಶ್ವರಿ ಸೇರಿ 9 ದೇವಿಯರ ಪರಿಚಯ, ದೇವಾಲಯದ ಇತಿಹಾಸ, ಮಹತ್ವ ತಿಳಿಸುವ ಕಾರ್ಯಕ್ರಮ, ಏನಿದೆ ವೇಳಾಪಟ್ಟಿ?

sigandur chowdeshwari temple

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅ.15 ರಿಂದ 23ರ ವರೆಗೆ ಪ್ರತಿದಿನ ಆಕಾಶವಾಣಿ ಭದ್ರಾವತಿ (Bhadravathi Akashvani) ಎಫ್‍ಎಂ (FM) 103.5 ಮತ್ತು ಎಂಡಬ್ಲ್ಯು (MW) 675 KHz ತರಂಗಾಂತರದಲ್ಲಿ ನವರಾತ್ರಿ (navaratri) ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ 9.30 ರಿಂದ 10 ಗಂಟೆವರೆಗೆ ಕರ್ನಾಟದ ಒಂಭತ್ತು ದೇವಿಯರ ಪರಿಚಯ ಆಯಾ ದೇವಾಲಯದ ಇತಿಹಾಸ ಮತ್ತು ಮಹತ್ವ ಕುರಿತು ವಿಶೇಷ ಪರಿಚಯಾತ್ಮಕ ಕಾರ್ಯಕ್ರಮ ಪ್ರಸಾರವಾಗಲಿದೆ.

READ | ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ

ಈ ದೇವಿಯರ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮ
ಬಾದಾಮಿ ಬನಶಂಕರಿ, ಹೊರನಾಡ ಅನ್ನಪೂರ್ಣೇಶ್ವರಿ, ಹಾಸನದ ಹಾಸನಾಂಬ, ಸಿಗಂದೂರಿನ ಚೌಡೇಶ್ವರಿ, ಕೊಲ್ಲೂರಿನ ಮೂಕಾಂಬಿಕೆ, ಸಿರ್ಸಿಯ ಮಾರಿಕಾಂಬಾ, ಕಟೀಲಿನ ದುರ್ಗಾ ಪರಮೇಶ್ವರಿ, ಶೃಂಗೇರಿಯ ಶಾರದಾಂಬೆ, ಮೈಸೂರಿನ ಚಾಮುಂಡೇಶ್ವರಿ ಕುರಿತ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.
newsonair ಆ್ಯಪ್’ನಲ್ಲಿ ಪ್ರಸಾರ
ವಿಶ್ವದಾದ್ಯಂತ ಪ್ರಸಾರಭಾರತಿ ‘newsonair’ ಆ್ಯಪ್‍ನಲ್ಲಿ ಭದ್ರಾವತಿ ಕೇಂದ್ರ ಮೂಲಕ ಸಹ ಪ್ರಸಾರ ಸಮಯದಲ್ಲಿ ಕೇಳಬಹುದು. ಪ್ರಸಾರ ನಂತರ ಆಕಾಶವಾಣಿ ಭದ್ರಾವತಿ ಯೂಟ್ಯೂಬ್ ಚಾನಲ್‍ನಲ್ಲಿ ಕೇಳಬಹುದು. ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ 9481572600 ಮುಖಾಂತರ ಹಂಚಿಕೊಳ್ಳಬಹುದು ಎಂದು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ತಿಳಿಸಿದ್ದಾರೆ.

error: Content is protected !!