Drinking water | ಎರಡು ದಿನ ಶಿವಮೊಗ್ಗದ ಹಲವು ಬಡಾವಣೆಗಳಿಗೆ ನೀರು ಬರಲ್ಲ, ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯ?

Water tap

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಕೆಳಕಂಡ ಪ್ರದೇಶಗಳಿಗೆ ಅ.12 ಮತ್ತು 13 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.‌ ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ |  ಶಿವಮೊಗ್ಗ-ಶಿಕಾರಿಪುರ ನೂತನ ರೈಲ್ವೆ ಮಾರ್ಗ, ಭರದಿಂದ ಸಾಗಿದೆ ಕಾಮಗಾರಿ

ಕಾರಣವೇನು?
ನಗರದ ಕೆ.ಆರ್.ವಾಟರ್‌ ವರ್ಕ್ಸ್‌ ನಲ್ಲಿರುವ ಆರ್.ಎಂ 7 ಕೊಳವೆ ಮಾರ್ಗಕ್ಕೆ 508‌ ಮಿಮೀ ವ್ಯಾಸದ ಎಂ.ಎಸ್ ಕೊಳವೆಮಾರ್ಗವು ಅಳವಡಿಸಿದ್ದು, ಸದರಿ ಕೊಳವೆ ಮಾರ್ಗವು ಅ.11ರಂದು ಹಾನಿಯಾಗಿದ್ದು, ತುರ್ತು ದುರಸ್ಥಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಎರಡು ದಿನ ನೀರು ಪೂರೈಕೆ ಸ್ಥಗಿತಗೊಳಿಸಬೇಕಾಗಿರುತ್ತದೆ.
ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯ?
ನಗರದ ಮಿಳ್ಳಘಟ್ಟ, ತುಂಗಾನಗರ, ಪಿ.ಡಬ್ಲ್ಯೂಡಿ ಟ್ಯಾಂಕ್ (ಮಾರಮಿಬೈಲ್), ಜಿಲ್ಲಾ ಪಂಚಾಯಿತಿ ಕಚೇರಿ ಎದುರು, ರವೀಂದ್ರನಗರ, ಸ್ಟೇಡಿಯಂ ಟ್ಯಾಂಕ್, ಶಿವಮೂರ್ತಿ ಸರ್ಕಲ್ ಟ್ಯಾಂಕ್‌ಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದಿಂದ ಸದರಿ ಟ್ಯಾಂಕ್‌ಗಳಿಗೆ ಹೊಂದಿಕೊಂಡಿರುವಂತಹ ಬಡಾವಣೆಗಳಲ್ಲಿ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

error: Content is protected !!