Good news | ರೈಲ್ವೆ ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ, ಯಾರಿಗೆಲ್ಲ ಅನ್ವಯ?

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈಲ್ವೆ ಸಿಬ್ಬಂದಿಗೆ ₹1968.87 ಕೋಟಿ ಉತ್ಪಾದನೆ ಆಧಾರಿತ ಬೋನಸ್(ಪಿಎಲ್ ಬಿ) ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ (Prime minister Narendra Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2022-23ನೇ ಹಣಕಾಸು ವರ್ಷದಲ್ಲಿ ರೈಲ್ವೆ ಸಿಬ್ಬಂದಿಗೆ 78 ದಿನದ ವೇತನಕ್ಕೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್ ಬಿ) ನೀಡಲು ಅನುಮೋದನೆ ನೀಡಿದೆ.

Shivamogga airport Modi

READ | ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ, ದಸರಾ ಪ್ರಯುಕ್ತ ಶಿವಮೊಗ್ಗ ಸೇರಿದಂತೆ ವಿವಿಧೆಡೆ ಸಂಚರಿಸುವ ರೈಲುಗಳ ನಿಲುಗಡೆ

ಯಾರಿಗೆಲ್ಲ ಅನ್ವಯ?
ರೈಲ್ವೆಯ ಎಲ್ಲ ಅರ್ಹ ಸಿಬ್ಬಂದಿ ಅಂದರೆ ಟ್ರಾಕ್‌ ನಿರ್ವಾಹಕರು, ಲೋಕೋ ಪೈಲಟ್ ಗಳು, ಟ್ರೈನ್ ಮ್ಯಾನೇಜರ್ಸ್ (ಗಾರ್ಡ್ಸ್), ಸ್ಟೇಷನ್ ಮಾಸ್ಟರ್, ಸೂಪರ್ ವೈಸರ್ಸ್, ಟೆಕ್ನಿಷಿಯನ್ಸ್, ಟೆಕ್ನಿಷಿಯನ್ ಹೆಲ್ಪರ್ಸ್, ಪಾಯಿಂಟ್ಸಮನ್, ಸಚಿವಾಲಯದ ಸಿಬ್ಬಂದಿ ಮತ್ತು ಗ್ರೂಪ್ ಸಿ ಸಿಬ್ಬಂದಿ (ಆರ್ ಪಿಎಫ್ ಮತ್ತು ಆರ್ ಪಿಎಸ್ ಎಫ್ ಹೊರತುಪಡಿಸಿ) ಇದಕ್ಕೆ ಒಳಪಡಲಿದ್ದಾರೆ.
ಪಿಎಲ್‌ಬಿ ಪಾವತಿಗೆ ಅನುಮೋದನೆ
ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಸಾಧನೆಯನ್ನು ಗುರುತಿಸಿ, ಕೇಂದ್ರ ಸರ್ಕಾರವು 11,07,346 ರೈಲ್ವೆ ಉದ್ಯೋಗಿಗಳಿಗೆ ₹1968.87 ಕೋಟಿ ಪಿಎಲ್‌ಬಿ ಪಾವತಿಗೆ ಅನುಮೋದನೆ ನೀಡಿದೆ. 2022-2023ರಲ್ಲಿ ರೈಲ್ವೆಯ ಸಾಧನೆ ಉತ್ತಮವಾಗಿತ್ತು. ರೈಲ್ವೆಯು 1509 ಮಿಲಿಯನ್ ಟನ್ ಗಳ ದಾಖಲೆಯ ಸರಕುಗಳನ್ನು ಲೋಡ್ ಮಾಡಿದೆ ಮತ್ತು ಸುಮಾರು 6.5 ಬಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.
ಈ ದಾಖಲೆಯ ಸಾಧನೆಗೆ ಹಲವು ಅಂಶಗಳು ಕೊಡುಗೆ ನೀಡಿವೆ. ರೈಲ್ವೆಯಲ್ಲಿ ಸರ್ಕಾರದಿಂದ ದಾಖಲೆಯ ಬಂಡವಾಳ ವೆಚ್ಚದ ಹರಿವು ಹೆಚ್ಚಾಗಿರುವುದರಿಂದ ಮೂಲಸೌಕರ್ಯದಲ್ಲಿನ ಸುಧಾರಣೆ, ಕಾರ್ಯಾಚರಣೆಗಳಲ್ಲಿ ದಕ್ಷತೆ ಮತ್ತು ಉತ್ತಮ ತಂತ್ರಜ್ಞಾನ ಇತ್ಯಾದಿಗಳು ಸೇರಿವೆ.
ಪಿಎಲ್‌ಬಿ ಪಾವತಿಯು ರೈಲ್ವೆ ಉದ್ಯೋಗಿಗಳನ್ನು ಮತ್ತಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಉತ್ತೇಜಿಸಲು ಪ್ರೋತ್ಸಾಹ ನೀಡಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

error: Content is protected !!