ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಳ್ಳಲಾದ ದೋಷಪೂರಿತ ಸೈಲೆನ್ಸರ್ (Defective Silencer) ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ಗಳನ್ನು ಶುಕ್ರವಾರ ಪೊಲೀಸ್ ಇಲಾಖೆಯಿಂದ ಬುಲ್ಡೋಜರ್ ಹತ್ತಿಸಿ ನಾಶಪಡಿಸಲಾಯಿತು.
ಮುಂದಿನ ದಿನಗಳಲ್ಲಿಯೂ ದೋಷಪೂರಿತ ಸೈಲೆನ್ಸರ್ ಮತ್ತು ಕರ್ಕಶ ಹಾರ್ನ್’ಗಳನ್ನು ಬಳಸುವ ಚಾಲಕ, ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಜಿ.ಕೆ.ಮಿಥುನ್ ಕುಮಾರ್, ಎಸ್.ಪಿ
ಜಿಲ್ಲೆಯಾದ್ಯಂತ ಒಟ್ಟು 231 ದೋಷಪೂರಿತ ಸೈಲೆನ್ಸರ್ ಮತ್ತು 41 ಕರ್ಕಶ ಹಾರ್ನ್ ಗಳನ್ನು ಬುಲ್ಡೋಜರ್ ಬಳಸಿ ನಾಶ ಪಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಎಲ್ಲಿ ಎಷ್ಟು ಸೈಲೆನ್ಸರ್, ಹಾರ್ನ್’ಗಳ ನಾಶ?
ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್’ನಲ್ಲಿ 70 ಸೈಲೆನ್ಸರ್ ಮತ್ತು 30 ಹಾರ್ನ್ ಗಳನ್ನು ಎಸ್ಪಿ ನೇತೃತ್ವದಲ್ಲಿ ನಾಶಪಡಿಸಿದರೆ, ಇನ್ನುಳಿದವು ಆಯಾ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ 135 ಸೈಲೆನ್ಸರ್, ಸಾಗರ ಟೌನ್ ಸೊರಬ ರಸ್ತೆಯ ಐತಪ್ಪ ವೃತ್ತದಲ್ಲಿ 14 ಸೈಲೆನ್ಸರ್ ಮತ್ತು 11 ಹಾರ್ನ್ಸ್, ಶಿಕಾರಿಪುರ ಟೌನ್ ಅಂಬೇಡ್ಕರ್ ವೃತ್ತದಲ್ಲಿ 12 ಸೈಲೆನ್ಸರ್’ಗಳನ್ನು ನಾಶಪಡಿಸಲಾಯಿತು.
https://suddikanaja.com/2022/12/22/dc-dr-r-selvamani-strict-instruction-to-voters/