ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬಂದೋಬಸ್ತ್ ಕರ್ತವ್ಯದ ವೇಳೆ ಗಲಭೆ ನಿಯಂತ್ರಣದ ಪ್ರಾತ್ಯಕ್ಷಿಕೆಯನ್ನು (Anti Riot Drill) ಆಯೋಜಿಸಲಾಗಿತ್ತು.
ಆಯುಧ, ಮದ್ದು ಗುಂಡುಗಳು ಮತ್ತು ಅಶ್ರುವಾಯು ಬಳಕೆ ಹಾಗೂ ಆ್ಯಂಟಿ ರಿಯೊಟ್ ಗೇರ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್ (Anti Riot Gear Protective Equipment)ಗಳಾದ ಲಾಠಿ, ಹೆಲ್ಮೇಟ್, ಬಾಡಿ ಪ್ರೊಟೆಕ್ಟರ್ ಮತ್ತು ಫೈಬರ್ ಶೀಲ್ಡ್ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸುವ ಮೂಲಕ ತರಬೇತಿಯನ್ನು ನೀಡಸಲಾಯಿತು.
https://suddikanaja.com/2022/12/23/one-lakh-job-recruitment-in-karnataka-said-cm-basavaraj-bommai/