sakrebyle elephant camp | ತುಂಬು‌ ಗರ್ಭಿಣಿ ಭಾನುಮತಿ ಬಾಲಕ್ಕೆ ಗಾಯ, ಅಧಿಕಾರಿಗಳು ಹೇಳುವುದೇನು? ಹಿಂಬಾಲಿಸಿಕೊಂಡು ಹೋದವರು ಶಾಕ್

elephant bhanumathi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಕ್ರೆಬೈಲು‌ ಆನೆಬಿಡಾರದ (sakrebyle elephant camp) ಗರ್ಭಿಣಿ ಆನೆಯೊಂದರ ಬಾಲಕ್ಕೆ ಗಂಭೀರ ಗಾಯವಾಗಿದ್ದು, ಹಲವು‌ ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ‌.‌ ಇದಕ್ಕೆ ಜನರೂ ಮನ ಮರಗುತ್ತಿದ್ದಾರೆ. ತುಂಬು ಗರ್ಭಿಣಿ ಆನೆಗೆ ಈ ರೀತಿ ಗಾಯವಾಗಿರುವ ಬಗ್ಗೆ ಬೇಸರ ವ್ಯಕ್ತವಾಗುತ್ತಿದೆ.

READ | ಶಿವಮೊಗ್ಗದಿಂದ ದೇಶದ ಮೂರು ಪ್ರಮುಖ ರಾಜ್ಯಗಳಿಗೆ ವಿಮಾನ ಸಂಚಾರಕ್ಕೆ ಡೇಟ್ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಸಕ್ರೆಬೈಲು ಆನೆ ಬಿಡಾರದ ಸುಮಾರು‌ 38 ವರ್ಷದ ಭಾನುಮತಿ ಆನೆಯ ಬಾಲ ತುಂಡಾಗುವಷ್ಟು ಗಾಯವಾಗಿದೆ. ಅದಕ್ಕೆ ವನ್ಯಜೀವಿ ವೈದ್ಯರು ಹೊಲಿಗೆ ಸಹ ಹಾಕಿದ್ದಾರೆ. ಆದರೆ, ಹೆರಿಗೆ ವೇಳೆ ಈ ರೀತಿ ಆಗಿದ್ದಕ್ಕೆ ವನ್ಯಜೀವಿ ಪ್ರೇಮಿಗಳಿಂದ ಭಾರೀ ಅಸಮಾಧಾನ ವ್ಯಕ್ತವಾಗಿದೆ.
ಇದು ಕಿಡಿಗೇಡಿಗಳ ಕೃತ್ಯವೋ?
ಭಾನುಮತಿ ಆನೆಯ ಬಾಲಕ್ಕೆ ಚೂಪಾದ ಆಯುದ್ಧದಿಂದ ಕಿಡಿಗೇಡಿಗಳು ಹೊಡೆದಿದಿರಬಹುದು. ಆನೆಯ ಮೇಲೆ ಯಾರೇ ಹಲ್ಲೆ ನಡೆಸಲಿ‌ಅದರ ಪೂರತಣ ಜವಾಬ್ದಾರಿ ಕಾವಾಡಿ ಮೊಹಮ್ಮದ್ ಹಾಗೂ ಸುದೀಪ್ ಅವರ ಮೇಲೆಯೇ ಇರುತ್ತದೆ.

sakrebailu elephant camp
ಸಕ್ರೆಬೈಲು ಆನೆಬಿಡಾರದ ಪ್ರವೇಶ ದ್ವಾರ.

ಪರಿಸರ ಪ್ರೇಮಿಗಳ ಆಗ್ರಹ
ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ಪತ್ತೆ ಹಚ್ಚಬೇಕು. ಸಿಬ್ಬಂದಿಯ. ಮೇಲೆಯೂ ವೈಯಕ್ತಿಕ ಆರೋಪಗಳಿದ್ದು, ಎಲ್ಲ ದೃಷ್ಟಿಕೋನದಲ್ಲಿ ತನಿಖೆ ನಡೆಸಬೇಕನ್ನುವುದು ವನ್ಯಜೀವಿ ಪ್ರೇಮಿಗಳ ಆಗ್ರಹವಾಗಿದೆ.
ಹಿಂಬಾಲಿಸಿಕೊಂಡು‌ ಹೋದವರಿಗೆ ಶಾಕ್
ಆನೆ ಗರ್ಭಿಣಿಯಾವಿದ್ದು, ಅದರ ಆರೈಕೆಯಲೂ ಉತ್ತಮವಾಗಿಯೇ ಇದೆ. ಸೋಮವಾರ ಬೆಳಗ್ಗೆ ಭಾನುಮತಿ ಆನೆಯನ್ನು ನೋಡಲು ಸಿಬ್ಬಂದಿ ತೆರಳಿದ್ದಾರೆ. ದಾರಿಯಲ್ಲಿ ಅಲ್ಲಲ್ಲಿ ರಕ್ತ ಬಿದ್ದಿತ್ತು. ಬಹುಶಃ ಆನೆಗೆ ಹೆರಿಗೆಯಾಗಿದೆ ಎಂಬ ಖುಷಿಯಲ್ಲಿದ್ದರು. ಆದರೆ, ಆನೆಯ ಬಾಲ ಕಟ್ ಆಗಿತ್ತು. ಇದರಿಂದ ಸಿಬ್ಬಂದಿಯೂ ಘಾಸಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಹೇಳುವುದೇ‌ನು?
ಆನೆ ಕಾಡಿಗೆ ತೆರಳಿದ್ದಾಗ ಮರದ‌ ಮೋಟು, ಚೂಪಾದ ಸಾಮಗ್ರಿಗೆ ಬಾಲ ತಾಕಿರಬಹುದು. ಅಥವಾ ಯಾರೋ ಹಲ್ಲೆ ಮಾಡಿರಬಹುದು. ಇದರ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!