ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ- ಬೆಂಗಳೂರು (shimoga- bengaluru) ನಡುವೆ ಈಗಾಗಲೇ ವಿಮಾನ ಸಂಚರಿಸುತ್ತಿದ್ದು, ಅದಕ್ಕೆ ಉತ್ತಮ ಬೇಡಿಕೆ ಇದೆ. ಈ ನಡುವೆ ಇನ್ನೊಂದು ಮಾರ್ಗಕ್ಕೆ ವಿಮಾನಯಾನ ಸೇವೆ ಆರಂಭವಾಗಲಿದೆ.
ಇನ್ಮುಂದೆ ಶಿವಮೊಗ್ಗದಿಂದ ಬರೀ ಬೆಂಗಳೂರು ಅಷ್ಟೇ ಅಲ್ಲ. ತಿರುಪತಿ(tirupathi), ಗೋವಾ(goa), ಹೈದರಾಬಾದ್(hyderabad) ಗೂ ವಿಮಾನ ಹಾರಾಟ ಆರಂಭವಾಗಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಸಹ ಶುರು ಆಗಿದೆ. ವಿಶೇಷವೆಂದರೆ ಶರವೇಗದಲ್ಲಿ ಪ್ರಯಾಣಿಸಬಹುದಾಗಿದೆ. ಈ ವಿಮಾನಯಾನ ಸೇವೆ ನೀಡಲು ಸ್ಟಾರ್ ಏರ್ ಲೈನ್ಸ್ (star airlines) ಮುಂದೆ ಬಂದಿದ್ದು, ಮಲೆನಾಡಿಗರ ಪಾಲಿಗೆ ಶುಭ ಸುದ್ದಿಯಾಗಿದೆ.

ನ.17ರಿಂದ ಸಿಗಲಿದೆ ‘ಸ್ಟಾರ್’ ಸೇವೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಸ್ತುತ ಇಂಡಿಗೋ ವಿಮಾನ (indigo flight) ಹಾರಾಟ ಮಾಡುತ್ತಿದೆ. ಸ್ಟಾರ್ ಏರ್ ಲೈನ್ಸ್ ಮುಂದೆ ಬಂದಿದ್ದು, ಏರ್ ಲೈನ್ಸ್ ನಿಂದ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನವೆಂಬರ್ 17ರಿಂದ ಸ್ಟಾರ್ ಏರ್ ಲೈನ್ಸ್ ಸೇವೆ ಜನರಿಗೆ ಸಿಗಲಿದೆ.
ವಾರದಲ್ಲಿ ಆರು ದಿನ ವಿಮಾನ ಸಂಚಾರ
ಶಿವಮೊಗ್ಗದಿಂದ ಹೈದರಾಬಾದ್(shimoga- hyderabad flight) ನಡುವೆ ಸಂಚರಿಸುವ ಈ ವಿಮಾನ ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್ ಗೆ ವಾರದಲ್ಲಿ ಆರು ದಿನ ಸಂಚರಿಸಲಿದೆ. ಪ್ರಯಾಣಿಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಆಧಾರದ ಮೇಲೆ ವಿಮಾನ ಸೇವೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಿಕೊಳ್ಳಲಾಗುವುದು.
READ | ಯಾವಾಗ ಬರಲಿದೆ ಗಜಪಡೆ, ಯಾವ ಆನೆಗಳು ದಸರಾದಲ್ಲಿ ಭಾಗಿ?, ಮಕ್ಕಳ ದಸರಾ ಯಾವ ದಿನ ಯಾವ ಸ್ಪರ್ಧೆ?
ವಿಮಾನ ಸಂಚಾರದ ವೇಳಾಪಟ್ಟಿ
- ಬೆಳಗ್ಗೆ 9.30 ಗಂಟೆಗೆ ಹೈದರಾಬಾದ್ ನಿಂದ ವಿಮಾನವು ಹೊರಟು ಬರೀ 1 ಗಂಟೆ 5 ನಿಮಿಷದಲ್ಲಿ ಶಿವಮೊಗ್ಗಕ್ಕೆ (ಬೆಳಗ್ಗೆ 10.35) ತಲುಪುವುದು.
- ಮತ್ತೆ ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನವು ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ.
- ತಿರುಪತಿಯಿಂದ ಮಧ್ಯಾಹ್ನ 12.35 ಗಂಟೆಗೆ ಹೊರಡಲಿದೆ. ಮಧ್ಯಾಹ್ನ 1.40 ಗಂಟೆಗೆ ಶಿವಮೊಗ್ಗಕ್ಕೆ ತಲುಪುವುದು.
- ಮಧ್ಯಾಹ್ನ 1.55 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಗೋವಾ ತಲುಪಲಿದೆ.
- ಗೋವಾದಿಂದ ಮಧ್ಯಾಹ್ನ 3.15 ಗಂಟೆಗೆ ಹೊರಟು ಸಂಜೆ 4.05 ಗಂಟೆಗೆ ಶಿವಮೊಗ್ಗ ತಲುಪಲಿದೆ.
- ಸಂಜೆ 4.30 ಗಂಟೆಗೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ.
ಹೆಚ್ಚಿನ ಮಾಹಿತಿಗೆ ಕರೆ ಮಾಡಿ, ಬುಕಿಂಗ್ ಶುರು
ವಿಮಾನದಲ್ಲಿ ಆಸನಗಳನ್ನು ಕಾಯ್ದಿರಿಸಲು ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಶುಭಂ ಹೊಟೇಲ್ ಸಮೀಪದ ಬ್ಲೂಬೆಲ್ ಹಾಲಿಡೇಸ್‌ನಲ್ಲಿ ಸ್ಟಾರ್ ಏರ್ ಟಿಕೆಟ್ ಬುಕಿಂಗ್ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 8123002917, 9449502917 ಸಂಪರ್ಕಿಸಲು ತಿಳಿಸಲಾಗಿದೆ.