Job fair | ಶಿವಮೊಗ್ಗದಲ್ಲಿ ನಡೆಯಲಿದೆ ಉದ್ಯೋಗ ಮೇಳ, ಯಾರೆಲ್ಲ ಭಾಗವಹಿಸಬಹುದು? ಕೂಡಲೇ ಹೆಸರು ನೋಂದಾಯಿಸಿ

Job Fair

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನ.8 ರಂದು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಸೈನ್ಸ್ ಫೀಲ್ಡ್‍ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

JOBS FB Link

READ | ಶಿವಮೊಗ್ಗದಲ್ಲಿ ಸ್ಟಾರ್ ಏರ್ ಸಂಸ್ಥೆಯಿಂದ ನೇರ ಸಂದರ್ಶನ, ಯಾವೆಲ್ಲ‌ ಹುದ್ದೆಗಳು ಖಾಲಿ?

ಯಾರೆಲ್ಲ ಭಾಗವಹಿಸಲು ಅವಕಾಶ?
ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್‍ಎಸ್‍ಎಲ್‍ಸಿ/ ಪಿಯುಸಿ/ ಐಟಿಐ/ಡಿಪ್ಲೊಮಾ/ ಬಿಇ ಮತ್ತು ಪದವಿ/ ಸ್ನಾತಕೋತ್ತರ ಪದವಿ ಉತ್ತೀರ್ಣ/ಅನುತ್ತೀರ್ಣ ಹೊಂದಿದ ಅಭ್ಯರ್ಥಿಗಳು ಬಯೊಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವುದು.
ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಸರು‌ ನೋಂದಾಯಿಸಿ
ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ http://skillconnect.kaushalkar.com/candidatereg  ರಲ್ಲಿ ಅಥವಾ ಸ್ಥಳದಲ್ಲೆ ನೇರವಾಗಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ದೂ.ಸಂ.: 08182-255294/ 9019485688/ 9880005425 ಇವರನ್ನು ಖುದ್ದಾಗಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!