Walk in Interview | ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಿಂದ ಉದ್ಯೋಗ, ಯಾರೆಲ್ಲ ಪಾಲ್ಗೊಳ್ಳಬಹುದು?

Shivamogga airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿಗರು ಶಿವಮೊಗ್ಗದಿಂದ ವಿಮಾನ ಹಾರಾಟದ ಖುಷಿಯಲ್ಲಿರುವಾಗಲೇ ಮತ್ತೊಂದು ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಸ್ಟಾರ್ ಏರ್ ನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಗತ್ಯವಿರುವ ಕೆಲವು ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಖುದ್ದು ಸ್ಟಾರ್ ಏರ್ ಅಧಿಕೃತವಾಗಿ ಇದನ್ನು ಟ್ವೀಟ್ ಮೂಲಕ ಘೋಷಿಸಿದೆ.

READ | ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಎಲ್ಲಿ, ಯಾವಾಗ, ಯಾರೆಲ್ಲ ಭಾಗವಹಿಸಬಹುದು?

ಯಾವೆಲ್ಲ ಹುದ್ದೆಗಳಿಗೆ ಸಂದರ್ಶನ
ಕಮರ್ಷಿಯಲ್ ಪೊಸಿಷನ್ಸ್ (commercial  Positions)

  • ಡ್ಯೂಟಿ ಸೂಪರ್ ವೈಸರ್/ ಆಫಿಸರ್
  • ಸೀನಿಯರ್ ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್
  • ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್
  • ಟ್ರೈನಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್

ಸೆಕ್ಯೂರಿಟಿ ಪೊಸಿಷನ್ಸ್ (Security Positions)

  • ಅಸಿಸ್ಟೆಂಟ್ ಮ್ಯಾನೇಜರ್ ಸೆಕ್ಯೂರಿಟಿ
  • ಸೆಕ್ಯೂರಿಟಿ ಸೂಪರ್’ವೈಸರ್
  • ಸೀನಿಯರ್ ಸೆಕ್ಯೂರಿಟಿ ಏಜೆಂಟ್
  • ಸೆಕ್ಯೂರಿಟಿ ಏಜೆಂಟ್
  • ಟ್ರೈನಿ ಸೆಕ್ಯೂರಿಟಿ ಏಜೆಂಟ್

ಎಲ್ಲಿ ನಡೆಯಲಿದೆ ಸಂದರ್ಶನ?
ನವೆಂಬರ್ 6ರಂದು ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ನಗರದ ಬಿ.ಎಚ್.ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಸೆಂಟ್ರಲ್ ಇಲ್ಲಿ ನೇರ ಸಂದರ್ಶನ ನಡೆಯಲಿದೆ.
ಈ ದಾಖಲೆಗಳನ್ನು ತನ್ನಿ
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಿ.ವಿ ಮತ್ತು ಮಾನ್ಯತೆ ಪಡೆದ ಗುರುತಿನ ಚೀಟಿ ಜೊತೆಯಲ್ಲಿ ತರತಕ್ಕದ್ದು. ಹುದ್ದೆಗೆ ಪೂರಕವಾದ ದಾಖಲೆಗಳು, ಅನುಭವ ಪತ್ರ ತರುವಂತೆ ತಿಳಿಸಲಾಗಿದೆ. ಆದರೆ, ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

Click here for Job advt

error: Content is protected !!