ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ರೈಲ್ವೆ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ಮತ್ತೆರಡು ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ಸುಂದರವಾಗಿ ಗಮನ ಸೆಳೆಯುತ್ತಿರುವ ಕಾಶಿಪುರ ರೈಲ್ವೆ ಮೇಲ್ಸೇತುವೆ, ಹೇಗಿದೆ ಕಾಮಗಾರಿ?
ಎಲ್ಲೆಲ್ಲಿ ರೈಲ್ವೆ ಸೇತುವೆಗಳ ನಿರ್ಮಾಣ?
₹6 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ತುಂಗಾನದಿ ರೈಲ್ವೆ ಸೇತುವೆ ಪಕ್ಕದಲ್ಲಿರುವ ಎಲ್.ಸಿ. ಗೇಟ್ ನಂಬರ್ 47 ರಲ್ಲಿ ₹6 ಕೋಟಿ ಮೊತ್ತದ ನೂತನ ಅಂಡರ್ ಪಾಸ್ (Railway underpass) ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.
₹25 ಕೋಟಿ ಮೊತ್ತದ ರೈಲ್ವೆ ಮೇಲ್ಸೇತುವೆ
ಸಾಗರ (sagar) ತಾಲ್ಲೂಕಿನ ಸೊರಬ (sorab) ರಸ್ತೆಯ ಎಲ್.ಸಿ. ಗೇಟ್ ನಂಬರ್ 130 ರಲ್ಲಿ ₹25 ಕೋಟಿ ಮೊತ್ತದ ನೂತನ ರೈಲ್ವೆ ಮೇಲ್ಸೇತುವೆ (Railway Over brdige- ROB) ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಹಂಚಿಕೆ ಮಾಡಿ ಆದೇಶಿಸಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ರಾಘವೇಂದ್ರ ಧನ್ಯವಾದಗಳನ್ನು ತಿಳಿಸಿದ್ದಾರೆ.