ಮಹಾನಗರ ಪಾಲಿಕೆಯಿಂದ ಸಂತ್ರಸ್ತರಿಗೆ ಊಟದ ವ್ಯವಸ್ಥೆ

 

 

hosamane

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಸಮನೆ ಬಡಾವಣೆಯಲ್ಲಿ 25ಕ್ಕೂ ಅಧಿಕ ಮನೆಗಳಿಗೆ ನೀರು ಹೊಕ್ಕಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಗುರುವಾರ ಮಹಾನಗರ ಪಾಲಿಕೆಯಿಂದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆಯ ಸದಸ್ಯೆ ರೇಖಾ ರಂಗನಾಥ್ ಸೇರಿದಂತೆ ಸಿಬ್ಬಂದಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ, ಅವರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಿದರು.

Rain News | ಅಕಾಲಿಕ ಮಳೆಗೆ ಹೊಸಮನೆಯಲ್ಲಿ ನೆರೆ, ಮನೆಯೊಳಗೆ ಹೊಕ್ಕಿದ ನೀರು, ರಾತ್ರಿಯಿಡೀ ಜನರ ಸಂಕಟ ಮಲೆನಾಡಿನಲ್ಲಿ ಮತ್ತೆ ಶುರುವಾಯ್ತು ಮಳೆ, ಕಳೆದ ಅರ್ಧ ಗಂಟೆಯಿಂದ ಧಾರಾಕಾರ ಮಳೆ, ದಿಢೀರ್ ಮಳೆ ಆವಾಂತರ, 25ಕ್ಕೂ ಹೆಚ್ಚು ಮನೆಯೊಳಗೆ ಹೊಕ್ಕಿದ ನೀರು

ಮೋಟರ್ ಮೂಲಕ ನೀರು ಹೊರಕ್ಕೆ: ಮನೆಯ ಬಹುತೇಕ ಸಾಮಗ್ರಿಗಳು ನೀರು ಪಾಲಾಗಿದ್ದು, ಊಟ ಸಿದ್ಧಪಡಿಸಿಕೊಳ್ಳುವುದಕ್ಕೂ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ. ಹೀಗಾಗಿ, ಪಾಲಿಕೆಯ ಆಯುಕ್ತ ಚಿದಾನಂದ್ ವಟಾರೆ ಅವರು ಬೆಳ್ಳಂಬೆಳಗ್ಗೆ ಹೊಸಮನೆ ಬಡಾವಣೆಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.

ಸಿಬ್ಬಂದಿಗೆ ಕೂಡಲೇ ಆಹಾರದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಜತೆಗೆ, ಮನೆಯಲ್ಲಿರುವ ನೀರು ಖಾಲಿ ಮಾಡುವುದಕ್ಕೆ ಮೋಟರ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ನೀರನ್ನು ಹೊರತೆಗೆಯಲಾಯಿತು.
ಸಿಲ್ಟ್ ಕ್ಲಿಯರ್: ರಾಜಕಾಲುವೆಯಲ್ಲಿ ತುಂಬಿರುವ ಹೂಳನ್ನು ಸ್ವಚ್ಚಗೊಳಿಸಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಬಹುತೇಕ ಚರಂಡಿಗಳಲ್ಲಿ ಸಿಲ್ಟ್ ತುಂಬಿಕೊಂಡಿತ್ತು. ಅನಪೇಕ್ಷಿತವಾಗಿ ಮಳೆ ಬಂದ ಪರಿಣಾಮ ಈ ಘಟನೆ ನಡೆದಿದೆ.

error: Content is protected !!